Skip to content
The Believer's Library

Biblica® Open Kannada Contemporary Version 2022

Psalms 23 OKCV

Side by side with the Father's Heart Bible™

ದಾವೀದನ ಕೀರ್ತನೆ.

1ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.

2ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ;ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.

3ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ.ತಮ್ಮ ಹೆಸರಿನ ನಿಮಿತ್ತನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.

4ನಾನು ಕಾರ್ಗತ್ತಲಿನಕಣಿವೆಯಲ್ಲಿ ನಡೆಯುವಾಗಲೂ,ನೀವು ನನ್ನೊಂದಿಗಿರುವುದರಿಂದನಾನು ಕೇಡಿಗೆ ಹೆದರೆನು;ನಿಮ್ಮ ದೊಣ್ಣೆಯೂ ನಿಮ್ಮ ಕೋಲೂನನ್ನನ್ನು ಸಂತೈಸುತ್ತವೆ.

5ನೀವು ನನ್ನ ವೈರಿಗಳ ಮುಂದೆಯೇನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ.ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ.ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.

6ನಿಶ್ಚಯವಾಗಿ ಶುಭವೂ ಪ್ರೀತಿಯೂನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ;ನಾನು ಯೆಹೋವ ದೇವರ ಮನೆಯಲ್ಲಿಸದಾಕಾಲವೂ ವಾಸಿಸುವೆನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]