Skip to content
The Believer's Library

Biblica® Open Kannada Contemporary Version 2022

Zephaniah 2 OKCV

Side by side with the Father's Heart Bible™

ಪಶ್ಚಾತ್ತಾಪಪಡಲು ಯೆಹೂದಕ್ಕೆ ಆದೇಶ

1ನಾಚಿಕೆ ಇಲ್ಲದ ಜನಾಂಗದವರೇ,ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ,

2ತೀರ್ಪು ಕಾರ್ಯಗತಗೊಳ್ಳುವ ಮುಂಚೆಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆಯೆಹೋವ ದೇವರ ಉಗ್ರಕೋಪವುನಿಮ್ಮ ಮೇಲೆ ಬರುವ ಮುಂಚೆ,ಯೆಹೋವ ದೇವರ ಕೋಪದ ದಿನವುನಿಮ್ಮ ಮೇಲೆ ಬರುವ ಮುಂಚೆ,

3ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇಯೆಹೋವ ದೇವರನ್ನು ಹುಡುಕಿರಿ.ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ.ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.

ಫಿಲಿಷ್ಟಿಯದ ವಿರೋಧವಾಗಿ

4ಗಾಜವು ಕೈಬಿಡಲಾಗುವುದು;ಅಷ್ಕೆಲೋನ್ ಹಾಳಾಗುವುದು;ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು,ಎಕ್ರೋನ್ ಕಿತ್ತೆಸೆಯಲಾಗುವುದು.

5ಅಯ್ಯೋ, ಕರಾವಳಿಯಲ್ಲಿ ವಾಸಿಸುವಕೆರೇತ್ಯ ಜನಾಂಗವೇ,ನಿನ್ನ ಗತಿಯನ್ನು ಏನು ಹೇಳಲಿ!ಕಾನಾನೇ, ಫಿಲಿಷ್ಟಿಯ ದೇಶವೇ,ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ,“ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,”ಎಂದು ಅವರು ಹೇಳುತ್ತಾರೆ.

6ಸಮುದ್ರದ ತೀರವುಕುರುಬರು ಮೇಯಿಸುವ ಸ್ಥಳಗಳಾಗಿಯೂಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.

7ಅದು ಯೆಹೂದದ ಮನೆತನದಲ್ಲಿಉಳಿದವರ ವಶವಾಗುವುದು.ಅದರ ಮೇಲೆ ಮೇಯಿಸುವರು.ಅಷ್ಕೆಲೋನಿನ ಮನೆತನಗಳಲ್ಲಿಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು.ಏಕೆಂದರೆ ಅವರ ದೇವರಾದ ಯೆಹೋವ ದೇವರು,ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು.

ಅಮ್ಮೋನು ಮತ್ತು ಮೋವಾಬುಗಳ ವಿರೋಧವಾಗಿ

8“ಮೋವಾಬಿನ ನಿಂದೆಯನ್ನೂಅಮ್ಮೋನ್ಯರ ಬೈಗಳವನ್ನೂಅವರು ನನ್ನ ಜನರನ್ನೂ ನಿಂದಿಸಿ,ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.

9ಆದ್ದರಿಂದ ಇಸ್ರಾಯೇಲಿನ ದೇವರಾದಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ:ನನ್ನ ಜೀವದಾಣೆ,”“ನಿಶ್ಚಯವಾಗಿ ಮೋವಾಬು ಸೊದೋಮಿನಅಮ್ಮೋನ್ಯರು ಗೊಮೋರದ ಹಾಗೆ ಆಗುವುದು.ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥನಿತ್ಯವಾಗಿ ಹಾಳಾದ ಸ್ಥಳವಾಗುವರು.ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು.ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”

10ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನುಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು.

11ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ,ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು.ಇತರ ಜನಾಂಗಗಳ ದ್ವೀಪಗಳವರೆಲ್ಲರುತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.

ಕೂಷ್ಯರ ವಿರೋಧವಾಗಿ

12ಕೂಷ್ ದೇಶದವರೇ, ನೀವೂ ಸಹನನ್ನ ಖಡ್ಗದಿಂದ ಹತರಾಗುವಿರಿ.

ಅಸ್ಸೀರಿಯ

13ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ,ಅಸ್ಸೀರಿಯರನ್ನು ನಾಶಮಾಡಿನಿನೆವೆಯನ್ನು ಹಾಳಾಗಿಯೂಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು.

14ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು,ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು.ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು,ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು,ದೇವದಾರು ಮರದ ತೊಲೆಗಳು ಕಳಚಿಬೀಳುವುವು.

15“ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,”ಎಂದು ತನ್ನೊಳಗೆ ಎಂದುಕೊಂಡಂಥಸುಭದ್ರ ನಿನೆವೆ ಪಟ್ಟಣವು ಇದೇ.ಅದು ಎಷ್ಟೋ ಹಾಳಾಯಿತು;ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು.ಅದರಲ್ಲಿ ಹಾದುಹೋಗುವವರೆಲ್ಲರೂನಿಂದಿಸಿ ಅಪಹಾಸ್ಯ ಮಾಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]