Skip to content
The Believer's Library

Biblica® Open Kannada Contemporary Version 2022

Zephaniah 1 OKCV

Side by side with the Father's Heart Bible™

1ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ಕಾಲದಲ್ಲಿ ಕೂಷಿಯ ಮಗನೂ ಗೆದಲ್ಯನ ಮೊಮ್ಮಗನೂ ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವ ದೇವರು ದಯಪಾಲಿಸಿದ ವಾಕ್ಯ:

ಯೆಹೋವ ದೇವರ ದಿನದಂದು ಇಡೀ ಭೂಮಿಯ ಮೇಲೆ ತೀರ್ಪು

2ಯೆಹೋವ ದೇವರು ಹೇಳುವುದೇನೆಂದರೆ,“ನಾನು ದೇಶದೊಳಗಿಂದ ಎಲ್ಲವುಗಳನ್ನುಸಂಪೂರ್ಣವಾಗಿ ನಾಶಮಾಡುವೆನು.”

3“ಮನುಷ್ಯರನ್ನೂ ಮೃಗಗಳನ್ನೂ ನಾಶಮಾಡುವೆನು.ಆಕಾಶದ ಪಕ್ಷಿಗಳನ್ನೂಸಮುದ್ರದ ಮೀನುಗಳನ್ನೂ ನಾಶಮಾಡುವೆನು.”“ಮನುಷ್ಯರನ್ನು ದೇಶದೊಳಗಿಂದ ಕಡಿದು ಬಿಡುವಾಗದುಷ್ಟರಿಗೆ ಉಳಿಯುವುದು ಕಸದರಾಶಿಯೇ,”ಎಂದು ಯೆಹೋವ ದೇವರು ಹೇಳುತ್ತಾರೆ.

4“ಯೆಹೂದದ ಮೇಲೆಯೂ ಯೆರೂಸಲೇಮಿನಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚುವೆನು.ಈ ಸ್ಥಳದಲ್ಲಿ ಬಾಳನ ಪೂಜೆಗಳನ್ನುಮತ್ತು ಉಳಿದಿರುವ ವಿಗ್ರಹಾರಾಧಕ ಯಾಜಕರಹೆಸರುಗಳನ್ನು ತೆಗೆದುಬಿಡುವೆನು.

5ಮಾಳಿಗೆಗಳ ಮೇಲೆ ತಲೆಬಾಗಿಸಿಆಕಾಶದ ನಕ್ಷತ್ರಗಣಕ್ಕೆಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ

6ಯೆಹೋವ ದೇವರನ್ನು ಅನುಸರಿಸದೆ ಹಿಂತಿರುಗಿ ಹೋಗುವವರನ್ನುಯೆಹೋವ ದೇವರನ್ನು ಹುಡುಕದೆಯೂ ವಿಚಾರಿಸದೆಯೂ ಇರುವವರನ್ನೂ ಕಡಿದುಬಿಡುವೆನು.”

7ಸಾರ್ವಭೌಮ ಯೆಹೋವ ದೇವರ ಮುಂದೆ ಮೌನವಾಗಿರಿ.ಏಕೆಂದರೆ ಯೆಹೋವ ದೇವರ ದಿನವು ಸಮೀಪವಾಗಿದೆ.ಯೆಹೋವ ದೇವರು ಯಜ್ಞವನ್ನು ಸಿದ್ಧಮಾಡಿದ್ದಾರೆ.ಅವರು ಆಮಂತ್ರಿಸಿದವರನ್ನು ಅವರು ಪವಿತ್ರೀಕರಿಸಿದ್ದಾರೆ.

8ಯೆಹೋವ ದೇವರ ಯಜ್ಞದ ದಿನದಲ್ಲಿನಾನು ಪ್ರಧಾನರನ್ನು, ರಾಜಪುತ್ರರನ್ನುಮತ್ತು ವಿದೇಶಿಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.

9ಆ ದಿನದಲ್ಲಿಹೊಸ್ತಿಲನ್ನು ದಾಟುವವರೆಲ್ಲರನ್ನೂತಮ್ಮ ದೇವರುಗಳ ಆಲಯಗಳನ್ನುಹಿಂಸಾಚಾರದಿಂದಲೂ ಮೋಸದಿಂದಲೂ ತುಂಬಿಸುವವರನ್ನೂ ದಂಡಿಸುವೆನು.

10“ಆ ದಿನದಲ್ಲಿ,ಮೀನಿನ ಬಾಗಿಲಿನಿಂದ ಕೂಗಿನ ಶಬ್ದವೂಹೊಸ ಮನೆಯಿಂದ ಗೋಳಾಟವೂಗುಡ್ಡಗಳ ಕಡೆಯಿಂದ ಮುರಿಯುವ ಬಲವಾದ ಶಬ್ದವೂ ಕೇಳಿಬರುವುದು, ಎಂದುಯೆಹೋವ ದೇವರು ಹೇಳುತ್ತಾರೆ.

11ಮಾರುಕಟ್ಟೆಗಳ ಜಿಲ್ಲೆಯಲ್ಲಿ ವಾಸಿಸುವವರೇ,ಗೋಳಾಡಿರಿ. ಏಕೆಂದರೆ ವರ್ತಕರ ಜನರೆಲ್ಲಾ ಸಂಹಾರವಾದರು.ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.

12ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು.‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡುಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆಸಮಾನರಾದ ಜನರನ್ನೂ ದಂಡಿಸುವೆನು.

13ಆದ್ದರಿಂದ ಅವರ ಸಂಪತ್ತು ಕೊಳ್ಳೆಯಾಗುವುದು,ಅವರ ಮನೆಗಳು ಹಾಳಾಗುವುವು.ಅವರು ಮನೆಗಳನ್ನು ಕಟ್ಟಿಕೊಂಡರೂಅವುಗಳಲ್ಲಿ ವಾಸಮಾಡರು.ದ್ರಾಕ್ಷಿತೋಟಗಳನ್ನು ನೆಟ್ಟುಅವುಗಳ ರಸವನ್ನು ಕುಡಿಯರು.”

14ಯೆಹೋವ ದೇವರ ಮಹಾದಿವಸವು ಸಮೀಪವಾಗಿದೆ,ಬಹು ತ್ವರೆಯಾಗಿ ಬರುತ್ತಿದೆ.ಕೇಳಿರಿ. ಯೆಹೋವ ದೇವರ ದಿನದಂದು ಕೂಗು ಕಹಿಯಾಗಿರುವುದು.ಶೂರನು ಅಲ್ಲಿ ಬೊಬ್ಬೆ ಹಾಕುವನು.

15ಆ ದಿವಸವು ರೌದ್ರದ ದಿವಸವು,ಇಕ್ಕಟ್ಟು ಸಂಕಟಗಳ ದಿವಸವು,ಹಾಳುಪಾಳುಗಳ ದಿವಸವು,ಕತ್ತಲೆ ಮಬ್ಬುಗಳ ದಿವಸವು,ಕಾರ್ಮುಗಿಲ ಕಗ್ಗತ್ತಲ ದಿವಸವು,

16ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂಉನ್ನತವಾದ ಗೋಪುರಗಳಿಗೆವಿರೋಧವಾಗಿಯೂ ತುತೂರಿ ಆರ್ಭಟಗಳ ದಿವಸವು.

17“ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು.ಅವರು ಕುರುಡರ ಹಾಗೆ ತಡಕುವರು.ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ.ಅವರ ರಕ್ತವು ಧೂಳಿನಂತೆಯೂಅವರ ಮಾಂಸವು ಗೊಬ್ಬರದಂತೆಯೂ ಸುರಿದಿರುವುದು.

18ಯೆಹೋವ ದೇವರ ರೌದ್ರದಿನದಂದುಅವರ ಬೆಳ್ಳಿಯಾದರೂ ಅವರ ಬಂಗಾರವಾದರೂಅವರನ್ನು ರಕ್ಷಿಸಲಾರವು.”ಅವರ ಅಸೂಯೆಯ ಬೆಂಕಿಯುದೇಶವನ್ನೆಲ್ಲಾ ನುಂಗುವುದು.ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾಬೇಗ ನಿರ್ಮೂಲ ಮಾಡಿಬಿಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]