Skip to content
The Believer's Library

Biblica® Open Kannada Contemporary Version 2022

Proverbs 14 OKCV

Show OKCV only
Verse × ×
1 The wisest of women builds her house, but foolishness tears hers down with her own hands. ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
2 Whoever walks in uprightness fears our Father, but one whose ways are crooked despises him. ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ, ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ.
3 A fool's mouth is a rod for his own pride, but the lips of the wise protect them. ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ, ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು.
4 Where there are no oxen, the manger stays clean, but an abundant harvest comes through the strength of an ox. ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ, ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ.
5 A faithful witness does not lie, but a false witness breathes out lies. ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು, ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.
6 The scoffer seeks wisdom and finds none, but knowledge comes easily to the discerning. ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ, ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ.
7 Stay away from a fool, for you will find no knowledge on his lips. ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ, ಅವನ ಬಳಿಯಿಂದ ಹೊರಟು ಹೋಗು.
8 The wisdom of the prudent is to discern their way, but the foolishness of fools is deceit. ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ. ಮೂಢರ ಬುದ್ಧಿಹೀನತೆಯು ಮೋಸಕರ.
9 Fools mock the guilt offering, but among the upright there is favor. ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು, ಆದರೆ ನೀತಿವಂತರಿಗೆ ದಯೆಯಿದೆ.
10 The heart knows its own bitterness, and no stranger shares in its joy. ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.
11 The house of the wicked will be destroyed, but the tent of the upright will flourish. ದುಷ್ಟರ ಮನೆಯು ನಾಶವಾಗುವುದು, ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು.
12 There is a way that seems right to a person, but its end is the way of death. ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ, ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ.
13 Even in laughter the heart may ache, and the end of joy may be grief. ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು, ಅದರ ಉಲ್ಲಾಸದ ಅಂತ್ಯವು ಸಂತಾಪವೇ.
14 The backslider in heart will be filled with the fruit of his ways, and a good person with the fruit of his. ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು, ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.
15 The simple believe anything, but the prudent give thought to their steps. ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
16 The wise fear and turn away from evil, but a fool is reckless and overconfident. ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು, ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು.
17 A quick-tempered person acts foolishly, and one who plots evil schemes is hated. ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ, ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ.
18 The simple inherit foolishness, but the prudent are crowned with knowledge. ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ, ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ.
19 The evil bow down before the good, and the wicked at the gates of the righteous. ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ, ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ.
20 The poor are shunned even by their neighbors, but the rich have many friends. ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು; ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು.
21 Whoever despises his neighbor sins, but blessed is the one who is kind to the poor. ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ, ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು.
22 Do not those who plot evil go astray? But covenant love and faithfulness belong to those who plan good. ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ? ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು.
23 In all hard work there is profit, but mere talk leads only to poverty. ಎಲ್ಲಾ ಪ್ರಯಾಸದಲ್ಲಿ ಲಾಭವಿದೆ, ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ.
24 The crown of the wise is their wealth, but the foolishness of fools yields only foolishness. ಜ್ಞಾನವಂತರ ಕಿರೀಟವೇ ಅವರ ಸಂಪತ್ತು, ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ.
25 A truthful witness saves lives, but one who breathes out lies is treacherous. ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ, ಸುಳ್ಳುಸಾಕ್ಷಿಯು ಮೋಸಗಾರನು.
26 In the fear of our Father is strong confidence, and his children will have a refuge. ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ. ಆತನ ಮಕ್ಕಳಿಗೆ ಆಶ್ರಯವು ಇರುವುದು.
27 The fear of our Father is a fountain of life, turning a person away from the snares of death. ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ. ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ.
28 A large population is a king's glory, but without people a prince is ruined. ಜನಸಮೂಹದಲ್ಲಿ ಅರಸನ ಘನತೆ ಇದೆ. ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
29 Whoever is slow to anger has great understanding, but a hot temper exalts foolishness. ತಾಳ್ಮೆಯುಳ್ಳವನು ಬಹು ವಿವೇಕಿ, ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು.
30 A tranquil heart gives life to the body, but envy rots the bones. ಶಾಂತ ಹೃದಯವು ದೇಹಕ್ಕೆ ಜೀವ; ಆದರೆ ಮತ್ಸರವು ಎಲುಬುಗಳಿಗೆ ಕ್ಷಯ.
31 Whoever oppresses the poor reproaches our Father, their Maker, but whoever is kind to the needy honors him. ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು, ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು.
32 The wicked are brought down by their own evil, but the righteous find refuge even in death. ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ, ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ.
33 Wisdom rests in the heart of the discerning, but even among fools it makes itself known. ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ, ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ.
34 Righteousness exalts a nation, but sin is a disgrace to any people. ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.
35 A king's favor rests on a wise servant, but his wrath falls on one who acts shamefully. ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]