Skip to content
The Believer's Library

Biblica® Open Kannada Contemporary Version 2022

Joel 3 OKCV

Show OKCV only
Verse × ×
1 "For look, in those days and at that time, when I restore the fortunes of Judah and Jerusalem, “ಆ ದಿವಸಗಳಲ್ಲಿಯೂ, ಆ ಸಮಯದಲ್ಲಿಯೂ ನಾನು ಯೆಹೂದ ಮತ್ತು ಯೆರೂಸಲೇಮಿನ ಸಿರಿಸಂಪತ್ತನ್ನು ಪುನಃ ಸ್ಥಾಪಿಸುವಾಗ,
2 I will gather all the nations and bring them down to the Valley of Jehoshaphat. There I will judge them on behalf of my people, my inheritance Israel, whom they scattered among the nations; for they divided up my land, ನಾನು ಎಲ್ಲಾ ಜನಾಂಗಗಳನ್ನು ಕೂಡಿಸುವೆನು. ಯೆಹೋಷಾಫಾಟನ ತಗ್ಗಿಗೆ ಅವರನ್ನು ತರುವೆನು. ಅಲ್ಲಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯವಾಗಿ ಅವರ ಸಂಗಡ ವ್ಯಾಜ್ಯವಾಡುವೆನು. ಅವರು ಅವರನ್ನು ಜನಾಂಗಗಳಲ್ಲಿ ಚದುರಿಸಿ, ನನ್ನ ದೇಶವನ್ನು ಹಂಚಿಕೊಂಡರು.
3 and they cast lots for my people. They traded a boy for a prostitute, and sold a girl for wine to drink. ನನ್ನ ಜನರಿಗೋಸ್ಕರ ಚೀಟುಹಾಕಿ, ಬಾಲಕರನ್ನು ವೇಶ್ಯಾ ವೃತ್ತಿಗೆ ಕೊಟ್ಟು, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕಾಗಿ ಮಾರಿದ್ದಾರೆ.
4 "Now what do you have against me, Tyre and Sidon, and all the regions of Philistia? Are you repaying me for something I have done? If you are paying me back, I will swiftly and speedily bring what you have done back on your own heads. “ಟೈರೇ, ಸೀದೋನೇ, ಫಿಲಿಷ್ಟಿಯದ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರೋಧವಾಗಿ ನಿಮಗೆ ಏನು ಇದೆ? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ಮುಯ್ಯಿ ನನಗೆ ಸಲ್ಲಿಸಿದರೆ, ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
5 For you took my silver and my gold and carried my finest treasures into your temples. ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ, ನನ್ನ ಅತ್ಯುತ್ತಮ ಸಂಪತ್ತನ್ನೂ ನಿಮ್ಮ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿದ್ದಿರಿ.
6 You sold the people of Judah and Jerusalem to the Greeks, to send them far away from their own land. ಯೆಹೂದದ ಹಾಗೂ ಯೆರೂಸಲೇಮಿನ ಜನರನ್ನು ಅವರ ಪ್ರಾಂತಗಳಿಂದ ದೂರ ಮಾಡುವುದಕ್ಕಾಗಿ ಗ್ರೀಕರಿಗೆ ಮಾರಿದ್ದೀರಿ.
7 "But look, I am rousing them from the place to which you sold them, and I will bring what you have done back on your own heads. “ಇಗೋ, ಎಲ್ಲಿ ಅವರನ್ನು ಮಾರಿದಿರೋ, ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ, ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿತೀರಿಸುವೆನು.
8 I will sell your sons and daughters to the people of Judah, and they will sell them to the Sabeans, to a nation far away—for our Father has spoken." ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ.
9 Proclaim this among the nations: Prepare for war! Rouse the warriors! Let all the fighting men draw near and come up. ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧಕ್ಕೆ ಇದನ್ನು ಸಿದ್ಧಮಾಡಿರಿ; ಶೂರರನ್ನು ಎಬ್ಬಿಸಿರಿ; ಯುದ್ಧಭಟರೆಲ್ಲರು ಸಮೀಪಿಸಿ ಬರಲಿ.
10 Beat your plowshares into swords and your pruning hooks into spears; let the weakling say, "I am a warrior." ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ ಬಲಹೀನನು ಸಹ ನಾನು ಶಕ್ತಿವಂತನು ಎಂದು ಹೇಳಲಿ.
11 Hurry and come, all you surrounding nations, and gather yourselves there. Bring down your warriors, our Father. ಸುತ್ತಲಿನ ಎಲ್ಲಾ ರಾಷ್ಟ್ರಗಳೇ, ಸಭೆಯಾಗಿ ಕೂಡಿಕೊಳ್ಳಿರಿ. ಯೆಹೋವ ದೇವರೇ, ನಿನ್ನ ಶೂರರನ್ನು ಕೆಳಗೆ ಇಳಿಸಿರಿ.
12 "Let the nations rouse themselves and come up to the Valley of Jehoshaphat; for there I will sit to judge all the surrounding nations. ಜನಾಂಗಗಳು ಎಚ್ಚೆತ್ತು ಯೆಹೋಷಾಫಾಟನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ಜನಾಂಗಗಳಿಗೆ ನ್ಯಾಯತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು.
13 Swing the sickle, for the harvest is ripe. Come, trample, for the winepress is full and the vats overflow—for their wickedness is great." ಕುಡುಗೋಲನ್ನು ಹಾಕಿರಿ. ಏಕೆಂದರೆ ಬೆಳೆ ಪಕ್ವವಾಯಿತು. ಬಂದು ಇಳಿಯಿರಿ. ಏಕೆಂದರೆ ದ್ರಾಕ್ಷಿಯ ಆಲೆ ತುಂಬಿ ಇದೆ. ತೊಟ್ಟಿಗಳು ತುಳುಕುವಂತೆ ಅವರ ಕೆಟ್ಟತನವು ಬಹಳವಾಗಿದೆ.
14 Multitudes, multitudes in the valley of decision! For the day of our Father is near in the valley of decision. ತೀರ್ಮಾನದ ಕಣಿವೆಯಲ್ಲಿ ಗುಂಪು ಗುಂಪುಗಳಾಗಿ ಜನರಿದ್ದಾರೆ! ಏಕೆಂದರೆ ಯೆಹೋವ ದೇವರ ದಿವಸವು ನಿರ್ಣಯದ ತಗ್ಗಿನಲ್ಲಿ ಸಮೀಪವಾಗಿದೆ.
15 The sun and the moon grow dark, and the stars hold back their light. ಸೂರ್ಯ, ಚಂದ್ರರು ಕಪ್ಪಾಗುವುವು. ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವುವು.
16 Our Father roars from Zion and raises his voice from Jerusalem; the heavens and the earth tremble. But our Father is a refuge for his people, a stronghold for the children of Israel. ಯೆಹೋವ ದೇವರು ಚೀಯೋನಿನೊಳಗಿಂದ ಗರ್ಜಿಸಿ, ಯೆರೂಸಲೇಮಿನೊಳಗಿಂದ ಗುಡುಗುವರು. ಆಕಾಶಗಳೂ ಭೂಮಿಯೂ ನಡುಗುವುವು. ಆದರೆ ಯೆಹೋವ ದೇವರು ತಮ್ಮ ಜನರಿಗೆ ಆಶ್ರಯವೂ, ಇಸ್ರಾಯೇಲರಿಗೆ ರಕ್ಷಣೆಯ ದುರ್ಗವೂ ಆಗಿರುವರು.
17 "Then you will know that I am your Father, living in Zion, my holy mountain. Jerusalem will be holy, and foreigners will never pass through it again. ಆಗ ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ವಾಸಿಸುವ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ ಎಂದು ನೀವು ತಿಳಿದುಕೊಳ್ಳುವಿರಿ. ಯೆರೂಸಲೇಮು ಪರಿಶುದ್ಧವಾಗಿರುವುದು. ವಿದೇಶಿಯರು ಅದನ್ನೆಂದಿಗೂ ಆಕ್ರಮಿಸರು.
18 "And in that day the mountains will drip with sweet wine, the hills will flow with milk, and all the streambeds of Judah will run with water. A spring will flow from my house and water the Valley of Acacias. ಆ ದಿವಸದಲ್ಲಿ ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವುವು. ಗುಡ್ಡಗಳು ಹಾಲಿನಿಂದ ಹರಿಯುವುವು. ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವುವು. ಯೆಹೋವ ದೇವರ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ಕಣಿವೆಗೆ ಜಲ ಕೊಡುವುದು.
19 Egypt will become a wasteland and Edom a desolate wilderness, because of the violence done to the people of Judah, in whose land they shed innocent blood. ಈಜಿಪ್ಟ್ ಹಾಳಾಗುವುದು. ಎದೋಮು ಹಾಳಾದ ಮರುಭೂಮಿಯಾಗುವುದು. ಏಕೆಂದರೆ ಅವರು ಯೆಹೂದದ ಜನರನ್ನು ಬಲಾತ್ಕಾರ ಮಾಡಿ, ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿದರು.
20 But Judah will be inhabited forever, and Jerusalem through all generations. ಯೆಹೂದವು ಎಂದೆಂದಿಗೂ ಜನಭರಿತವಾಗುವುದು. ಯೆರೂಸಲೇಮು ಸಹ ತಲತಲಾಂತರಕ್ಕೂ ನಿಲ್ಲುವುದು.
21 I will cleanse the guilt of the blood shed against them—which I have not yet cleansed—for our Father dwells in Zion." ನಾನು ಅವರ ಮುಗ್ಧ ರಕ್ತಕ್ಕೆ ಪ್ರತೀಕಾರ ತೀರಿಸದೆ ಬಿಡಬೇಕೇ? ಇಲ್ಲ, ನಾನು ಎಂದಿಗೂ ಬಿಡುವುದಿಲ್ಲ. ಯೆಹೋವ ದೇವರು ಚೀಯೋನಿನಲ್ಲಿ ವಾಸವಾಗಿರುತ್ತಾರೆ.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]