Skip to content
The Believer's Library

Biblica® Open Kannada Contemporary Version 2022

Proverbs 8 OKCV

Show OKCV only
Verse × ×
1 Does not Wisdom call out, and understanding raise her voice? ಜ್ಞಾನವು ಕರೆಯುತ್ತದಲ್ಲವೋ? ತಿಳುವಳಿಕೆ ಎಂಬಾಕೆಯು ತನ್ನ ಸ್ವರವನ್ನು ಎತ್ತಿ ಕೂಗಿ ಕರೆಯುವುದಿಲ್ಲವೋ?
2 Atop the heights along the way, where the paths meet, she takes her stand. ಉನ್ನತ ಸ್ಥಳಗಳ ತುದಿಯಲ್ಲಿಯೂ, ಹಾದಿಗಳ ಸಂಧಿಗಳಲ್ಲಿಯೂ ನಿಂತುಕೊಳ್ಳುತ್ತಾಳೆ.
3 Beside the gates, at the entrance to the city, at the doorways she cries aloud: ಪಟ್ಟಣದ ಪ್ರವೇಶ ದ್ವಾರಗಳಲ್ಲಿಯೂ ಒಳಗೆ ಬರುವಾಗ ಅವಳು ಸ್ವರವೆತ್ತಿ ಹೇಳುವುದೇನೆಂದರೆ,
4 "To you, all people, I call out; my voice reaches all humanity. “ಮನುಷ್ಯರೇ, ನಾನು ಕರೆಯುತ್ತಿರುವುದು ನಿಮ್ಮನ್ನೇ, ಮಾನವರಿಗಾಗಿಯೇ ನಾನು ಧ್ವನಿಗೈಯುತ್ತೇನೆ.
5 You who are simple, learn prudence; you who are foolish, gain an understanding heart. ಮುಗ್ಧರೇ, ಜ್ಞಾನವನ್ನು ಗ್ರಹಿಸಿರಿ. ಬುದ್ಧಿಹೀನರೇ, ನೀವು ತಿಳುವಳಿಕೆಯ ಹೃದಯದವರಾಗಿರಿ.
6 Listen, for I speak of noble things, and everything I say is right. ಕೇಳಿರಿ, ಉತ್ಕೃಷ್ಟ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯುವೆನು.
7 My mouth utters truth, for my lips detest wickedness. ನನ್ನ ಬಾಯಿಯು ಸತ್ಯವನ್ನು ಮಾತಾಡುವುದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.
8 All the words of my mouth are righteous; none of them is twisted or crooked. ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯುಕ್ತವಾಗಿವೆ; ಮೂರ್ಖತನವಾಗಲಿ, ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
9 To the one who understands they are all clear, and right to those who find knowledge. ವಿವೇಚಿಸುವವನಿಗೆ ನನ್ನ ಎಲ್ಲ ಮಾತುಗಳು ನೇರವಾಗಿರುವುದು. ತಿಳುವಳಿಕೆ ಉಳ್ಳವನಿಗೆ ಅವು ಪ್ರಾಮಾಣಿಕವಾಗಿಯೂ ಇರುವುದು.
10 Take my instruction instead of silver, and knowledge rather than choice gold, ಬೆಳ್ಳಿಗಿಂತ ನನ್ನ ಬೋಧನೆಯನ್ನು ಆರಿಸಿಕೋ ಉತ್ತಮ ಬಂಗಾರಕ್ಕಿಂತ ಮಿಗಿಲಾದ ತಿಳುವಳಿಕೆಯನ್ನು ಪಡೆದುಕೋ.
11 for wisdom is better than jewels, and nothing you desire can compare with her. ಏಕೆಂದರೆ ಮಾಣಿಕ್ಯಗಳಿಗಿಂತ ಜ್ಞಾನವು ಅಮೂಲ್ಯವಾದದ್ದು. ಅಪೇಕ್ಷಿಸತಕ್ಕ ಯಾವ ವಸ್ತುಗಳನ್ನು ಅದಕ್ಕೆ ಹೋಲಿಸಲಾಗದು.
12 I, Wisdom, dwell with prudence, and I find knowledge and discretion. “ಜ್ಞಾನವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ತಿಳುವಳಿಕೆಯನ್ನೂ ವಿವೇಚನೆಯನ್ನೂ ನಾನು ಹೊಂದಿದ್ದೇನೆ.
13 The fear of our Father is to hate evil. Pride and arrogance, the evil way, and perverse speech I hate. ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.
14 Counsel is mine, and sound wisdom; I am understanding; strength is mine. ಸಮಾಲೋಚನೆಯೂ ಒಳ್ಳೆಯ ನ್ಯಾಯವೂ ನನ್ನಲ್ಲಿದೆ. ನನ್ನಲ್ಲಿ ಒಳನೋಟವೂ ಶಕ್ತಿಯೂ ಇವೆ.
15 By me kings reign, and rulers decree what is just; ನನ್ನ ಮೂಲಕ ರಾಜರು ಆಳುವರು; ಪ್ರಧಾನರು ನ್ಯಾಯವಾದ ತೀರ್ಪು ಕೊಡುವರು.
16 by me princes govern, and nobles—all who rule with justice. ನನ್ನಿಂದ ಅಧಿಪತಿಗಳು ಆಳುತ್ತಾರೆ, ಕೀರ್ತಿವಂತರೆಲ್ಲರೂ ಭೂಮಿಯ ಮೇಲೆ ಆಳುವರು.
17 I love those who love me, and those who search for me find me. ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ; ಹಂಬಲಿಸಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 With me are riches and honor, enduring wealth and righteousness. ಐಶ್ವರ್ಯವೂ ಘನತೆಯೂ, ಶಾಶ್ವತ ಸಂಪತ್ತು ಹಾಗೂ ಸಮೃದ್ಧಿಯು ನನ್ನೊಂದಿಗಿವೆ.
19 My fruit is better than gold, than the finest gold, and what I yield surpasses choice silver. ನನ್ನ ಫಲವು ಬಂಗಾರಕ್ಕಿಂತಲೂ, ನನ್ನ ಆದಾಯವು ಉತ್ತಮವಾದ ಬೆಳ್ಳಿಗಿಂತಲೂ ಶ್ರೇಷ್ಠವಾಗಿವೆ.
20 I walk in the way of righteousness, along the paths of justice, ನೀತಿಯ ಮಾರ್ಗದಲ್ಲಿಯೂ ನ್ಯಾಯದ ದಾರಿ ನಡುವೆಯೂ ನಾನು ನಡೆಯುತ್ತೇನೆ.
21 giving wealth as an inheritance to those who love me, and filling their treasuries. ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದುವರು. ನಾನು ಅವರ ಬೊಕ್ಕಸಗಳನ್ನು ತುಂಬಿಸುವೆನು.
22 Our Father brought me forth at the beginning of his way, before his works of old. “ಯೆಹೋವ ದೇವರು ತಮ್ಮ ಸೃಷ್ಟಿಕ್ರಮದಲ್ಲಿ ನನ್ನನ್ನು ಮೊದಲು ನಿರ್ಮಿಸಿದರು, ದೇವರ ಪುರಾತನ ಕಾರ್ಯಗಳಲ್ಲಿ ನಾನೇ ಮೊದಲು;
23 From ages past I was established, from the beginning, before the earth began. ಪ್ರಾರಂಭದಲ್ಲಿ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲಿ ದೇವರು ನನ್ನನ್ನು ಸೃಷ್ಟಿಸಿದರು.
24 When there were no deep waters I was brought forth, when there were no springs overflowing with water. ಆಗಾಧಗಳು ಇಲ್ಲದೆ ಇರುವಾಗ ನಾನು ಹುಟ್ಟಿ ಬಂದೆನು, ನೀರಿನ ಬುಗ್ಗೆಗಳು ಇಲ್ಲದೆ ಇರುವಾಗಲೇ ನಾನಿದ್ದೆನು.
25 Before the mountains were settled, before the hills, I was brought forth, ಪರ್ವತಗಳು ಸ್ಥಾಪಿತವಾಗುವುದಕ್ಕಿಂತ ಮುಂಚೆಯೂ ಬೆಟ್ಟಗುಡ್ಡಗಳಿಗಿಂತ ಮೊದಲು ನಾನು ಜನಿಸಿದೆನು.
26 while he had not yet made the earth and its fields, or the first dust of the world. ಭೂಮಿಯನ್ನೂ ಹೊಲಗಳನ್ನೂ ಲೋಕದ ಅಣುಗಳನ್ನೂ ಅವರು ನಿರ್ಮಿಸದೆ ಇರುವಾಗಲೇ ನಾನು ಜನಿಸಿದೆನು.
27 When he set the heavens in place, I was there; when he drew a circle over the face of the deep, ಅವರು ಆಕಾಶಗಳನ್ನು ಸಿದ್ಧಪಡಿಸಿದಾಗ ಸಾಗರದ ಮೇಲೆ ಚಕ್ರವನ್ನು ಹಾಕಿದಾಗ,
28 when he set the skies in place above, when he established the springs of the deep, ಮೇಲೆ ಮೇಘಗಳನ್ನು ಅವರು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಅವರು ಬಲಪಡಿಸಿದಾಗ,
29 when he set for the sea its boundary so the waters would not cross their limits, when he marked out the foundations of the earth, ಪ್ರವಾಹಗಳು ತನ್ನ ಆಜ್ಞೆಯನ್ನು ಮೀರದಂತೆ ಸಮುದ್ರಕ್ಕೆ ಅವರು ಮೇರೆಯನ್ನು ಮಾಡಿ ಭೂಮಿಯ ಅಸ್ತಿವಾರಗಳನ್ನು ನೇಮಿಸಿದಾಗ, ನಾನು ಅಲ್ಲಿ ಇದ್ದೆನು.
30 then I was beside him as a master craftsman, and I was his daily delight, rejoicing before him always, ಆಗ ನಾನು ಅವರೊಂದಿಗೆ ಕುಶಲ ಶಿಲ್ಪಿಯಂತೆ ಅವರ ಹತ್ತಿರ ಇದ್ದೆನು. ಅವರ ಸನ್ನಿಧಿಯಲ್ಲಿ ಯಾವಾಗಲೂ ಆನಂದಿಸುತ್ತಾ ಅನುದಿನವೂ ಸಂತೋಷಿಸುತ್ತಿದ್ದೆನು.
31 rejoicing in his whole world, and delighting in the human family. ಅವರ ಭೂಮಿಯ ವಾಸಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು; ಮಾನವರೊಂದಿಗೆ ಆನಂದಿಸುತ್ತಿದ್ದೆನು.
32 And now, my children, listen to me: blessed are those who keep my ways. “ಆದ್ದರಿಂದ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.
33 Listen to instruction and be wise; do not ignore it. ನನ್ನ ಬೋಧನೆಯನ್ನು ಕೇಳಿ ಬುದ್ಧಿವಂತರಾಗಿರಿ; ಅದನ್ನು ನೀವು ತಿರಸ್ಕರಿಸಬೇಡಿರಿ.
34 Blessed is the one who listens to me, watching daily at my gates, waiting beside my doorway. ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ, ನನ್ನ ಬಾಗಿಲುಗಳ ನಿಲುವುಗಳಲ್ಲಿ ನಿರೀಕ್ಷಿಸುತ್ತಾ, ನನ್ನ ಮಾತುಗಳನ್ನು ಕೇಳುವವರು ಧನ್ಯರು.
35 For whoever finds me finds life and receives favor from our Father. ಏಕೆಂದರೆ ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಯೆಹೋವ ದೇವರ ಕೃಪೆಯನ್ನು ಹೊಂದುವನು.
36 But whoever misses me harms his own soul; all who hate me love death." ಆದರೆ ನನ್ನನ್ನು ಬಿಟ್ಟು ದೂರಹೋಗುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]