Skip to content
The Believer's Library

Biblica® Open Kannada Contemporary Version 2022

Numbers 30 OKCV

Show OKCV only
Verse × ×
1 Moses told Israel's tribal heads: This is what our Father commanded. ಮೋಶೆಯು ಇಸ್ರಾಯೇಲರ ಗೋತ್ರಗಳ ನಾಯಕರ ಸಂಗಡ ಮಾತನಾಡಿ, “ಯೆಹೋವ ದೇವರು ಆಜ್ಞಾಪಿಸಿದ್ದೇನೆಂದರೆ:
2 When a man vows a vow to our Father, or swears an oath binding himself with a pledge, he must not break his word; he must do all his mouth has spoken. ಯಾವನಾದರೂ ಯೆಹೋವ ದೇವರಿಗೆ ಹರಕೆಯನ್ನು ಮಾಡಿದರೆ, ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ, ಅವನು ತನ್ನ ಮಾತನ್ನು ತಪ್ಪಿಸಬಾರದು. ಬಾಯಿಂದ ಹೊರಟ ಮಾತುಗಳ ಪ್ರಕಾರ ಎಲ್ಲವನ್ನೂ ಮಾಡಬೇಕು.
3 If a woman vows a vow to our Father and binds herself by a pledge while young, living in her father's house, “ಸ್ತ್ರೀಯು ಯೆಹೋವ ದೇವರಿಗೆ ಹರಕೆಮಾಡಿ, ತನ್ನ ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿ ದೇವರಿಗೆ ಹರಕೆಯನ್ನು ಮಾಡಿದಾಗ, ಇಲ್ಲವೆ ಯಾವುದಾದರೊಂದನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದಾಗ,
4 when her father hears her vow and pledge binding her, and says nothing to her, all her vows and every pledge binding her stand. ಅವಳ ತಂದೆಯು ಆ ವಿಷಯವನ್ನು ತಿಳಿದು ಮೌನವಾಗಿದ್ದರೆ, ಅವಳು ಆ ಹರಕೆ ಮತ್ತು ಪ್ರಮಾಣಗಳನ್ನು ನೆರವೇರಿಸಲೇಬೇಕು.
5 But if her father forbids her the day he hears, none of her vows or bonds she bound herself with will stand; our Father will forgive her, because her father forbade her. ಆದರೆ ಅವಳ ತಂದೆ ಅದನ್ನು ಕೇಳಿ ಅವಳನ್ನು ತಡೆದರೆ, ಅವಳ ಎಲ್ಲಾ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುತ್ತವೆ. ಅವಳ ತಂದೆ ಅವಳನ್ನು ತಡೆದ ಕಾರಣ ಯೆಹೋವ ದೇವರು ಅವಳನ್ನು ಕ್ಷಮಿಸುವರು.
6 If she marries while under her vows, or under a rash promise she has made, “ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಹರಕೆಗಳು ಇಲ್ಲವೆ ಪ್ರಾಣವನ್ನು ಬಂಧಿಸುವ ಬಾಯಿಂದ ಬಂದ ಮಾತು ಇದ್ದರೆ,
7 and her husband hears of it and stays silent to her on the day he hears, her vows stand, and the bonds she bound herself with stand. ಅವಳ ಗಂಡನು ಆ ವಿಷಯವನ್ನು ತಿಳಿದು ಸುಮ್ಮನಿದ್ದ ಪಕ್ಷದಲ್ಲಿ ಅವಳ ಹರಕೆಗಳೂ ಪ್ರತಿಜ್ಞೆಗಳೂ ನೆರವೇರಬೇಕು.
8 But if her husband forbids her the day he hears, he cancels the vow binding her and the rash promise she made; and our Father will forgive her. ಆದರೆ ಅವಳ ಗಂಡನು ಅದನ್ನು ಕೇಳಿದಾಗ ಬೇಡವೆಂದು ತಡೆದು, ಅವಳ ಮೇಲೆ ಇರುವ ಅವಳ ಹರಕೆಯನ್ನೂ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆಯನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಯೆಹೋವ ದೇವರು ಅವಳಿಗೆ ಕ್ಷಮಿಸುವರು.
9 But a widow's or divorced woman's vow—everything she bound herself to—stands against her. “ಇದಲ್ಲದೆ ವಿಧವೆಯಾದರೂ ವಿವಾಹ ವಿಚ್ಛೇದಿತ ಮಹಿಳೆಯಾದರೂ ಇಂತಹ ಹರಕೆ ಇಲ್ಲವೆ ಪ್ರಮಾಣ ಮಾಡಿಕೊಂಡರೆ ಅವಳು ಅದನ್ನು ನೆರವೇರಿಸಬೇಕು.
10 If she vowed in her husband's house, or bound herself by a pledge under oath, “ಅವಳು ತನ್ನ ಗಂಡನ ಮನೆಯಲ್ಲಿ ಅಂತಹ ಹರಕೆ ಇಲ್ಲವೆ ಪ್ರತಿಜ್ಞೆಯನ್ನು ಮಾಡಿದಾಗ,
11 and her husband heard it, said nothing to her, and did not forbid her—so all her vows stand, and every pledge by which she bound herself stands. ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು, ಅವಳನ್ನು ತಡೆಯದ ಪಕ್ಷದಲ್ಲಿ, ಅವಳ ಸಮಸ್ತ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುವುವು.
12 But if her husband nullifies them the day he hears, nothing she said—her vows or the pledge binding her—will stand: he has nullified them, and our Father will forgive her. ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕ ಮಾಡಿದ ಪಕ್ಷದಲ್ಲಿ ಅವಳ ಹರಕೆಗಳಿಗೋಸ್ಕರವೂ ಅವಳು ಕೈಗೊಂಡ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವುದಾಗಲಿ ನಿಲ್ಲದು. ಅವಳ ಗಂಡನು ಅವುಗಳನ್ನು ನಿರರ್ಥಕ ಮಾಡಿದ್ದಾನೆ. ಯೆಹೋವ ದೇವರು ಅವಳಿಗೆ ಕ್ಷಮಿಸುವರು.
13 Any vow and any binding oath to humble herself, her husband may confirm or nullify it. ಸಮಸ್ತ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಸಮಸ್ತ ಹರಕೆಗಳನ್ನೂ, ಅವಳ ಗಂಡನು ಅದನ್ನು ಸ್ಥಾಪಿಸಬಹುದು ಅಥವಾ ಅದನ್ನು ರದ್ದುಗೊಳಿಸಬಹುದು.
14 But if her husband stays silent to her from day to day, he confirms all her vows or obligations binding her; he confirms them, because he stayed silent to her on the day he heard them. ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ, ಅವನು ಅವಳ ಸಮಸ್ತ ಹರಕೆಗಳನ್ನೂ ಅವಳ ಮೇಲಿರುವ ಸಮಸ್ತ ಪ್ರತಿಜ್ಞೆಗಳನ್ನೂ ಅನುಮೋದಿಸಿದಂತಾಗುವುದು. ಅವನು ಕೇಳಿದ ದಿನದಲ್ಲಿ ಅದಕ್ಕೆ ಸುಮ್ಮನಿರುವುದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
15 But if he nullifies them after he has heard them, then he will bear her guilt. ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ, ಅವನೇ ಅವಳ ಅಕ್ರಮವನ್ನು ಹೊರಬೇಕು.”
16 These are the rules our Father commanded Moses, between a man and his wife, between a father and his young daughter still in his house. ಗಂಡ ಹೆಂಡತಿಯರ ವಿಷಯದಲ್ಲಿಯೂ ತಂದೆಯ ಮನೆಯಲ್ಲಿ ಕನ್ಯಾವಸ್ಥೆಯಲ್ಲಿರುವ ಮಗಳ ವಿಷಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]