Skip to content
The Believer's Library

Biblica® Open Kannada Contemporary Version 2022

John 9 OKCV

Show OKCV only
Verse × ×
1 As Jesus passed by, he saw a man who had been blind from birth. ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು.
2 His disciples asked him, "Rabbi, who sinned, this man or his parents, that he was born blind?" ಯೇಸುವಿನ ಶಿಷ್ಯರು, “ಬೋಧಕರೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಈ ಮನುಷ್ಯನ ಪಾಪದಿಂದಲೋ ಇವನ ತಂದೆತಾಯಿಗಳ ಪಾಪದಿಂದಲೋ?” ಎಂದು ಅವರನ್ನು ಕೇಳಿದರು.
3 "Neither this man nor his parents sinned,' Jesus answered, 'but this happened so the works of our Father might be revealed in him. ಯೇಸು, “ಈ ಮನುಷ್ಯನಾಗಲಿ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಯಿತು.
4 We must do the works of the one who sent me while it is day; night comes, when no one can work. ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು.
5 As long as I am in the world, I am the light of the world.'" ನಾನು ಈ ಲೋಕದಲ್ಲಿರುವಾಗ ಲೋಕದ ಬೆಳಕಾಗಿದ್ದೇನೆ,” ಎಂದರು.
6 Saying this, he spat on the ground, made mud from the saliva, and smeared it on the man's eyes. ಯೇಸು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಮಣ್ಣಿನ ಲೇಪಮಾಡಿ ಆ ಲೇಪವನ್ನು ಅವನ ಕಣ್ಣುಗಳಿಗೆ ಹಚ್ಚಿದರು.
7 He told him, "Go, wash in the pool of Siloam" (meaning Sent). So the man went, washed, and returned able to see. ಅವನಿಗೆ, “ಹೋಗು, ಸಿಲೋವ ಕೊಳದಲ್ಲಿ ತೊಳೆದುಕೋ,” ಎಂದರು. ಸಿಲೋವ ಎಂದರೆ, “ಕಳುಹಿಸಲಾದವನು” ಎಂದರ್ಥ. ಕುರುಡನು ಹೋಗಿ ಕಣ್ಣು ತೊಳೆದುಕೊಂಡು ದೃಷ್ಟಿಹೊಂದಿದವನಾಗಿ ಬಂದನು.
8 Neighbors and those who'd seen him begging before said, "Isn't this the one who used to sit and beg?" ಆಗ ನೆರೆಯವರು ಮತ್ತು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ಕಂಡವರು, “ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೇ?” ಎಂದರು.
9 Some said, "That's him." Others said, "No, he just looks like him." He kept saying, "I'm the one." ಕೆಲವರು, “ಹೌದು, ಇವನೇ,” ಎಂದರು. ಇನ್ನೂ ಬೇರೆಯವರು, “ಇಲ್ಲಾ, ಇವನು ಅವನ ಹಾಗೆ ಇದ್ದಾನೆ,” ಎಂದರು. ಅವನಾದರೋ, “ನಾನೇ ಅವನು,” ಎಂದು ಹೇಳಿದನು.
10 So they asked him, "Then how were your eyes opened?" ಕೆಲವರು ಅವನಿಗೆ, “ಹಾಗಾದರೆ ನಿನಗೆ ದೃಷ್ಟಿ ಹೇಗೆ ಬಂತು?” ಎಂದು ಕೇಳಲು,
11 He replied, "The man called Jesus made mud, smeared it on my eyes, and told me, 'Go to Siloam and wash.' So I went, washed, and could see." ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ,’ ಎಂದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು, ನನಗೆ ದೃಷ್ಟಿ ಬಂತು,” ಎಂದನು.
12 They said to him, "Where is he?" He said, "I do not know." ಅವರು ಅವನಿಗೆ, “ಆತನು ಎಲ್ಲಿದ್ದಾನೆ?” ಎಂದು ಕೇಳಲು, ಅವನು, “ನನಗೆ ಗೊತ್ತಿಲ್ಲ,” ಎಂದನು.
13 They brought the man who had been blind to the Pharisees. ಜನರು ಮೊದಲು ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
14 Now it was a Sabbath day when Jesus made the mud and opened his eyes. ಯೇಸು ಮಣ್ಣಿನ ಲೇಪಮಾಡಿ ಅವನಿಗೆ ದೃಷ್ಟಿಕೊಟ್ಟ ದಿನವು ಯೆಹೂದ್ಯರ ಸಬ್ಬತ್ ದಿನವಾಗಿತ್ತು.
15 So the Pharisees also asked him again how he had gained sight. He told them, "He put mud on my eyes, and I washed, and I see." ಆದ್ದರಿಂದ ಫರಿಸಾಯರು ಅವನಿಗೆ, ಹೇಗೆ ದೃಷ್ಟಿ ಬಂತು ಎಂದು ತಿರುಗಿ ಅವನನ್ನು ಕೇಳಲು, ಅವನು ಅವರಿಗೆ, “ಯೇಸು ಮಣ್ಣಿನ ಲೇಪವನ್ನು ನನ್ನ ಕಣ್ಣುಗಳ ಮೇಲಿಡಲು ನಾನು ತೊಳೆದುಕೊಂಡೆನು. ಈಗ ನೋಡುತ್ತೇನೆ,” ಎಂದನು.
16 Some Pharisees said, "This man isn't from God—he doesn't keep the Sabbath." Others said, "How can a sinful man do such signs?" So they were divided among them. ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ. ಏಕೆಂದರೆ ಆತನು ಯೆಹೂದ್ಯರ ಸಬ್ಬತ್ ದಿನವನ್ನು ಕೈಗೊಳ್ಳುವುದಿಲ್ಲ,” ಎಂದರು. ಬೇರೆ ಕೆಲವರು, “ಹಾಗಾದರೆ ಪಾಪಿಯಾದ ಮನುಷ್ಯನು ಇಂಥ ಸೂಚಕಕಾರ್ಯಗಳನ್ನು ಮಾಡುವುದು ಹೇಗೆ?” ಎಂದರು. ಹೀಗೆ ಅವರಲ್ಲಿ ಭೇದ ಉಂಟಾಯಿತು.
17 Again they asked the blind man, "What do you say about him, since he opened your eyes?" He said, "He is a prophet." ಅವರು ತಿರುಗಿ, “ಆತನು ನಿನಗೆ ದೃಷ್ಟಿಕೊಟ್ಟದ್ದರಿಂದ ಆತನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದಾಗ, ಅವನು, “ಅವರು ಒಬ್ಬ ಪ್ರವಾದಿ,” ಎಂದನು.
18 The Jews did not believe he had been blind and gained sight, until they summoned the parents of the man who had gained sight. ದೃಷ್ಟಿಹೊಂದಿದವನ ತಂದೆತಾಯಿಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ, ಅವನು ಕುರುಡನಾಗಿದ್ದು ದೃಷ್ಟಿಹೊಂದಿದನೆಂದು ನಂಬಲಿಲ್ಲ.
19 They asked them, "Is this your son you say was born blind? How then does he now see?" ಅವರು, “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಕಣ್ಣು ಕಾಣುವುದು ಹೇಗೆ?” ಎಂದು ಅವರನ್ನು ಕೇಳಿದರು.
20 His parents answered, "We know that this is our son and that he was born blind. ಅವನ ತಂದೆತಾಯಿಗಳು ಅವರಿಗೆ, “ಇವನು ನಮ್ಮ ಮಗನೆಂದೂ ಇವನು ಕುರುಡನಾಗಿ ಹುಟ್ಟಿದನೆಂದೂ ನಾವು ಬಲ್ಲೆವು.
21 But how he now sees, we don't know; or who opened his eyes, we don't know. Ask him—he's an adult; he'll speak for himself." ಆದರೆ ಇವನಿಗೆ ಈಗ ಕಣ್ಣು ಕಾಣುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೆಂದೂ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ; ಇವನು ಪ್ರಾಯದವನಾಗಿದ್ದಾನೆ. ಇವನೇ ತನ್ನ ವಿಷಯವಾಗಿ ಮಾತನಾಡುವನು,” ಎಂದು ಹೇಳಿದರು.
22 His parents said this, fearing the Jews, since the Jews had already agreed that if anyone confessed Jesus as the Christ, he would be expelled from the synagogue. ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಭಯಪಟ್ಟಿದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ, ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯ ನಾಯಕರು ಈ ಮೊದಲೇ ಗೊತ್ತುಮಾಡಿದ್ದರು.
23 That was why his parents said, "He is of age; ask him." ಆದ್ದರಿಂದ ಅವನ ತಂದೆತಾಯಿಗಳು, “ಇವನು ಪ್ರಾಯದವನಾಗಿದ್ದಾನೆ, ಇವನನ್ನೇ ಕೇಳಿ,” ಎಂದು ಹೇಳಿದರು.
24 So they called the once-blind man again and said, "Give God the glory. We know this man is a sinner." ಅವರು ಕುರುಡನಾಗಿದ್ದವನನ್ನು ಮತ್ತೊಮ್ಮೆ ಕರೆದು ಅವನಿಗೆ, “ದೇವರಿಗೆ ಮಹಿಮೆಯನ್ನು ಸಲ್ಲಿಸು, ಆ ಮನುಷ್ಯ ಪಾಪಿ ಎಂದು ನಾವು ಬಲ್ಲೆವು,” ಎಂದರು.
25 He replied, "Whether he's a sinner, I don't know. I know one thing: I was blind, now I see." ಅದಕ್ಕೆ ಅವನು, “ಅವರು ಪಾಪಿಯೋ ಏನೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆ, ನಾನು ಕುರುಡನಾಗಿದ್ದೆನು; ಈಗ ನನಗೆ ಕಾಣುತ್ತದೆ,” ಎಂದು ಉತ್ತರಕೊಟ್ಟನು.
26 They said to him, "What did he do to you? How did he open your eyes?" ಆದ್ದರಿಂದ ಅವರು ಅವನಿಗೆ, “ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
27 He answered them, "I already told you, and you didn't listen. Why do you want to hear it again? Do you also want to become his disciples?" ಅವನು ಉತ್ತರವಾಗಿ, “ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ. ಆದರೆ ನೀವು ಕೇಳಲಿಲ್ಲ, ನೀವು ತಿರುಗಿ ಏಕೆ ಕೇಳುತ್ತೀರಿ? ನೀವು ಸಹ ಅವರ ಶಿಷ್ಯರಾಗುವುದಕ್ಕೆ ಬಯಸುತ್ತೀರೋ?” ಎಂದನು.
28 And they reviled him, saying, "You are his disciple, but we are disciples of Moses. ಆಗ ಅವರು ಅವನನ್ನು ದೂಷಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
29 We know God spoke to Moses, but we don't know where this man is from." ಮೋಶೆಯ ಮೂಲಕ ದೇವರು ಮಾತನಾಡಿದನೆಂದು ನಾವು ಬಲ್ಲೆವು. ಆದರೆ ಈತನು ಎಲ್ಲಿಂದ ಬಂದನೋ ನಮಗೆ ಗೊತ್ತಿಲ್ಲ,” ಎಂದರು.
30 The man answered them, "Here's the amazing thing: you don't know where he's from, yet he opened my eyes. ಅದಕ್ಕೆ ಅವನು ಅವರಿಗೆ, “ಏನಾಶ್ಚರ್ಯ! ಅವರು ನನ್ನ ಕಣ್ಣುಗಳನ್ನು ತೆರೆದರೂ ಅವರು ಎಲ್ಲಿಂದ ಬಂದವನೆಂದು ನಿಮಗೆ ತಿಳಿಯದೆ ಇರುವುದು.
31 We know God doesn't listen to sinners, but if anyone reveres God and does his will, God listens to him. ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲ; ಆದರೆ ಯಾರು ದೇವರಿಗೆ ಭಯಪಡುವವರಾಗಿದ್ದು ಅವರ ಚಿತ್ತದಂತೆ ನಡೆಯುತ್ತಾರೋ, ಅಂಥವರಿಗೆ ಕಿವಿಗೊಡುತ್ತಾರೆಂದು ನಾವು ಬಲ್ಲೆವು.
32 Never since the world began has anyone heard of someone opening the eyes of a person born blind. ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ.
33 If this man were not from God, he could do nothing." ಅವರು ದೇವರಿಂದ ಬಂದವರಲ್ಲದಿದ್ದರೆ ಅವರಿಂದ ಏನೂ ಮಾಡಲಾಗುತ್ತಿರಲಿಲ್ಲ,” ಎಂದನು.
34 They answered him, "You were born entirely in sin, yet you teach us?" and threw him out. ಅದಕ್ಕೆ ಅವರು, “ನೀನು ಪಾಪದಲ್ಲಿಯೇ ಪೂರ್ಣವಾಗಿ ಹುಟ್ಟಿದವನು. ನೀನು ನಮಗೆ ಬೋಧಿಸುತ್ತೀಯಾ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
35 Jesus heard they had thrown him out, and finding him, said, "Do you believe in the Son of Man?" ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು.
36 He answered, "And who is he, sir, so I can believe in him?" ಅದಕ್ಕೆ ಅವನು, “ಸ್ವಾಮೀ, ನಾನು ಅವರನ್ನು ನಂಬುವಂತೆ ಅವರು ಯಾರೆಂದು ತಿಳಿಸಿರಿ,” ಎಂದನು.
37 Jesus said to him, "You have seen him, and it is he who is speaking with you." ಯೇಸು ಅವನಿಗೆ, “ನೀನು ಆತನನ್ನು ಕಂಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು,” ಎಂದು ಹೇಳಿದರು.
38 He said, "Lord, I believe," and he worshiped him. ಆಗ ಅವನು, “ಸ್ವಾಮೀ, ನಾನು ನಂಬುತ್ತೇನೆ,” ಎಂದು ಹೇಳಿ ಯೇಸುವಿಗೆ ಅಡ್ಡಬಿದ್ದನು.
39 Jesus said, "I came into this world for judgment, so those who don't see may see, and those who see may become blind." ಯೇಸು, “ಕುರುಡರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನಾನು ನ್ಯಾಯತೀರ್ಪು ಮಾಡುವುದಕ್ಕಾಗಿ ಈ ಲೋಕಕ್ಕೆ ಬಂದಿದ್ದೇನೆ,” ಎಂದರು.
40 Some Pharisees with him heard this and said, "Are we blind too?" ಯೇಸುವಿನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತುಗಳನ್ನು ಕೇಳಿ, “ನಾವು ಸಹ ಕುರುಡರೋ?” ಎಂದು ಯೇಸುವನ್ನು ಪ್ರಶ್ನಿಸಿದರು.
41 Jesus told them, "If you were blind, you would have no sin; but since you say, 'We see,' your sin remains." ಅದಕ್ಕೆ ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ, ‘ನಮಗೆ ಕಾಣುತ್ತದೆ,’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪವು ನಿಮಗೆ ಉಳಿದಿದೆ,” ಎಂದರು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]