Skip to content
The Believer's Library

Biblica® Open Kannada Contemporary Version 2022

Mark 15 OKCV

Show OKCV only
Verse × ×
1 At dawn the chief priests, elders, scribes, and the whole council consulted together, bound Jesus, led him away, and handed him over to Pilate. ಬೆಳಗಾದ ಕೂಡಲೇ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರ ಮತ್ತು ಆಲೋಚನಾ ಸಭೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಯೇಸುವಿಗೆ ಬೇಡಿಹಾಕಿಸಿ ಪಿಲಾತನಿಗೆ ಒಪ್ಪಿಸಿದರು.
2 Pilate asked him, "Are you the King of the Jews?" "You say so," Jesus replied. ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಲು, “ನೀನೇ ಅದನ್ನು ಹೇಳಿದ್ದೀ” ಎಂದು ಯೇಸು ಉತ್ತರಿಸಿದರು.
3 The chief priests kept accusing him of many things. ಇದಲ್ಲದೆ ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ದೂರುಗಳನ್ನು ಹೇಳಿದರು.
4 So Pilate questioned him again: "Have you no answer? See how many charges they bring against you." ಆದರೆ ಪಿಲಾತನು ತಿರುಗಿ ಯೇಸುವಿಗೆ, “ನೀನು ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು,” ಎಂದು ಕೇಳಿದನು.
5 But Jesus said nothing more, and Pilate was amazed. ಆದರೂ ಯೇಸು ಉತ್ತರ ಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
6 Now at the festival, Pilate used to release one prisoner for them—whoever they asked for. ಹಬ್ಬದಲ್ಲಿ ಜನರು ಕೋರಿದ ಒಬ್ಬ ಸೆರೆಯಾಳನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
7 A man called Barabbas was in prison with the rebels who had committed murder during the uprising. ದಂಗೆ ಮಾಡಿದವರೊಂದಿಗೆ ಬಂಧಿಸಲಾದ ಆ ದಂಗೆಯಲ್ಲಿ ಕೊಲೆಮಾಡಿದ ಬರಬ್ಬನೆಂಬ ಹೆಸರುಳ್ಳವನೊಬ್ಬನು ಸೆರೆಯಲ್ಲಿ ಇದ್ದನು.
8 The crowd came up and began asking Pilate to do for them what he always did. ಜನಸಮೂಹವು ಪಿಲಾತನು ತಮಗೆ ಯಾವಾಗಲೂ ಮಾಡುತ್ತಿದ್ದ ಪ್ರಕಾರ ಮಾಡಬೇಕೆಂದು ಅವನನ್ನು ಬೇಡಿಕೊಳ್ಳಲಾರಂಭಿಸಿದರು.
9 "Do you want me to release for you the King of the Jews?" Pilate answered, ಪಿಲಾತನು ಅವರಿಗೆ, “ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ?” ಎಂದು ಕೇಳಿದನು.
10 for he knew it was out of envy that the chief priests had handed him over. ಮುಖ್ಯಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.
11 But the chief priests stirred up the crowd to have him release Barabbas for them instead. ಆದರೆ ಮುಖ್ಯಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಜನರನ್ನು ಪ್ರೇರೇಪಿಸಿದರು.
12 "So what do you want me to do with the one you call King of the Jews?" Pilate asked them again. ಪಿಲಾತನು ಅವರಿಗೆ, “ಹಾಗಾದರೆ ನೀವು ಯೆಹೂದ್ಯರ ಅರಸನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕೆನ್ನುತ್ತೀರಿ?” ಎಂದು ಕೇಳಿದನು.
13 Crucify him!" they shouted back. ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತೆ ಕೂಗಿಕೊಂಡರು.
14 "Why? What evil has he done?" Pilate asked. But they shouted all the louder, "Crucify him!" ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
15 To satisfy the crowd, Pilate released Barabbas to them. He had Jesus flogged, and handed him over to be crucified. ಪಿಲಾತನು ಜನರನ್ನು ಮೆಚ್ಚಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
16 Soldiers led him away into the palace (the governor's headquarters) and called together the whole company of soldiers. ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ತೆಗೆದುಕೊಂಡು ಬಂದು ತಮ್ಮ ದಳದವರನ್ನೆಲ್ಲಾ ಒಟ್ಟಾಗಿ ಕರೆದರು.
17 They dressed him in purple, twisted together a crown of thorns, and set it on him. ಅವರು ಯೇಸುವಿಗೆ ಕಡುಗೆಂಪು ಬಣ್ಣದ ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲೆ ಇಟ್ಟರು.
18 And they began to salute him: "Hail, King of the Jews!" ತರುವಾಯ ಅವರು, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ,” ಎಂದರು.
19 They kept beating his head with a staff, spat on him, and knelt in mock homage to him. ಅವರು ಬೆತ್ತದಿಂದ ಯೇಸುವಿನ ತಲೆಯ ಮೇಲೆ ಹೊಡೆದು, ಅವರ ಮೇಲೆ ಉಗುಳಿ ಮೊಣಕಾಲೂರಿ ಅವರಿಗೆ ನಮಸ್ಕರಿಸಿದರು.
20 After mocking him, they stripped off the purple and put his own clothes on him, then led him out to crucify him. ಹೀಗೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದ ಮೇಲೆ ಕಡುಗೆಂಪು ಬಣ್ಣದ ಬಟ್ಟೆಯನ್ನು ಅವರಿಂದ ತೆಗೆದುಹಾಕಿ ಅವರ ಸ್ವಂತ ಬಟ್ಟೆಗಳನ್ನು ಅವರಿಗೆ ಉಡಿಸಿ ಶಿಲುಬೆಗೆ ಹಾಕುವುದಕ್ಕಾಗಿ ತೆಗೆದುಕೊಂಡು ಹೋದರು.
21 They forced a passerby coming from the countryside—Simon of Cyrene, father of Alexander and Rufus—to carry his cross. ಅಲೆಕ್ಸಾಂದ್ರ ಮತ್ತು ರೂಫ ಎಂಬುವರ ತಂದೆಯಾದ ಕುರೇನೆದ ಸೀಮೋನನು ಗ್ರಾಮದಿಂದ ಹಾದು ಹೋಗುತ್ತಿರುವಾಗ, ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
22 They brought Jesus to the place called Golgotha (which means Place of a Skull). ತರುವಾಯ “ತಲೆಬುರುಡೆಯ ಸ್ಥಳ” ಎಂದು ಅರ್ಥವಿದ್ದ “ಗೊಲ್ಗೊಥಾ” ಎಂಬ ಸ್ಥಳಕ್ಕೆ ಅವರು ಯೇಸುವನ್ನು ತೆಗೆದುಕೊಂಡು ಬಂದರು.
23 They offered him wine mixed with myrrh, but he did not take it. ಆಗ ಅವರು ಯೇಸುವಿಗೆ ರಕ್ತಬೋಳ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ತೆಗೆದುಕೊಳ್ಳಲಿಲ್ಲ.
24 They crucified him. They divided his clothes among them, casting lots for what each would get. ಅವರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ಬಟ್ಟೆಗಳನ್ನು ಪಾಲುಮಾಡಿಕೊಂಡರು. ಯಾರಿಗೆ ಯಾವುದು ಬರುವುದೋ ಎಂದು ಚೀಟುಹಾಕಿದರು.
25 It was nine in the morning when they crucified him. ಯೇಸುವನ್ನು ಶಿಲುಬೆಗೆ ಹಾಕಿದಾಗ ಮುಂಜಾನೆ ಒಂಬತ್ತು ಗಂಟೆಯಾಗಿತ್ತು.
26 The written notice of the charge against him read: THE KING OF THE JEWS. ಯೇಸುವಿನ ಮೇಲೆ ಹೊರಿಸಿದ ದೋಷಾರೋಪಣೆ ಹೀಗೆ ಬರೆದಿತ್ತು: ಈತನು ಯೆಹೂದ್ಯರ ಅರಸನು.
27 They crucified two rebels with him, one on his right and one on his left. ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು, ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
28 Not in this edition ಹೀಗೆ, “ಆತನನ್ನು ಅಪರಾಧಿಗಳೊಂದಿಗೆ ಸೇರಿಸಿದರು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು.
29 Those passing by insulted him, shaking their heads, saying, "Ha! You who tear down the temple and build it in three days, ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ, “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ,
30 save yourself and come down from the cross!" ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದು ಬಾ,” ಎಂದು ಯೇಸುವನ್ನು ಅಪಹಾಸ್ಯ ಮಾಡಿದರು.
31 Likewise the chief priests and scribes mocked him among themselves: "He saved others; himself he can't save. ಅದೇ ಪ್ರಕಾರ ಮುಖ್ಯಯಾಜಕರು ನಿಯಮ ಬೋಧಕರೂ ಯೇಸುವನ್ನು ಅಪಹಾಸ್ಯಮಾಡಿ, “ಈತನು ಇತರರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು!
32 Let the Christ, King of Israel, come down from the cross now, so we can see and believe." Those crucified with him also insulted him. ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ಕಂಡು ನಂಬುತ್ತೇವೆ,” ಎಂದು ತಮ್ಮಲ್ಲಿ ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಗಿದ್ದವರೂ ಅವರನ್ನು ನಿಂದಿಸಿದರು.
33 At noon, darkness came over the whole land until three in the afternoon. ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
34 At three in the afternoon Jesus cried out loudly, "Eloi, Eloi, lema sabachthani?" meaning, "My God, my God, why have you forsaken me?" ಮೂರು ಗಂಟೆಯ ಸಮಯದಲ್ಲಿ ಯೇಸು, “ಎಲೋಹಿ, ಎಲೋಹಿ, ಲಮಾ ಸಬಕ್ತಾನೀ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದರು.
35 When some of those standing nearby heard this, they said, "Listen, he's calling Elijah." ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇಗೋ, ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
36 One ran, filled a sponge with sour wine, put it on a reed, and gave him a drink. "Let him be," he said, "let's see if Elijah comes to take him down." ಆಗ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯಲು ಕೊಟ್ಟು, “ಬಿಡಿರಿ, ಈತನನ್ನು ಕೆಳಗೆ ಇಳಿಸುವುದಕ್ಕೆ ಎಲೀಯನು ಬರುವನೋ ನೋಡೋಣ,” ಎಂದನು.
37 With a loud cry, Jesus breathed his last. ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟರು.
38 And the curtain of the temple was torn in two from top to bottom. ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು.
39 The centurion facing Jesus saw how he breathed his last and said, "Truly this man was the Son of God." ಯೇಸು ಹೀಗೆ ಕೂಗಿ ಪ್ರಾಣಬಿಟ್ಟಿದ್ದನ್ನು ಅವರ ಎದುರಿಗೆ ನಿಂತಿದ್ದ ಶತಾಧಿಪತಿಯು ಕಂಡು, “ನಿಜವಾಗಿಯೂ ಈ ಮನುಷ್ಯನು ದೇವಪುತ್ರ,” ಎಂದನು.
40 Women were also watching from a distance, including Mary Magdalene, Mary the mother of James the younger and Joses, and Salome. ಅಲ್ಲಿ ಸ್ತ್ರೀಯರು ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿ ಮರಿಯಳು, ಸಲೋಮೆಯು ಇದ್ದರು.
41 These women had followed him in Galilee and served him; many others who came up with him to Jerusalem were also there. ಯೇಸು ಗಲಿಲಾಯದಲ್ಲಿದ್ದಾಗ ಈ ಸ್ತ್ರೀಯರು ಅವರನ್ನು ಹಿಂಬಾಲಿಸಿ, ಉಪಚರಿಸಿದರು. ಯೇಸುವಿನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಅನೇಕ ಸ್ತ್ರೀಯರೂ ಅಲ್ಲಿದ್ದರು.
42 Evening had come, and since it was Preparation Day—the day before the Sabbath. ಸಂಜೆ ಸಮೀಪಿಸುತ್ತಿದ್ದಾಗ, ಅದು ಸಬ್ಬತ್ ದಿನದ ಸಿದ್ಧತೆಯ ಹಿಂದಿನ ದಿವಸವಾಗಿತ್ತು.
43 Joseph of Arimathea, a prominent council member who himself was waiting for the kingdom of our Father, dared to go to Pilate and ask for Jesus' body. ಗೌರವವುಳ್ಳವನೂ ಆಲೋಚನಾಸಭೆಯ ಸದಸ್ಯನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು.
44 Pilate was surprised he was already dead; summoning the centurion, he asked if Jesus had been dead long. ಯೇಸು ಅಷ್ಟು ಬೇಗ ಮರಣಹೊಂದಿದ್ದಾರೆಂದು ತಿಳಿದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು, “ಯೇಸು ಆಗಲೇ ಮೃತನಾದನೋ?” ಎಂದು ವಿಚಾರಿಸಿ
45 When he learned from the centurion that it was so, he granted the body to Joseph. ತಿಳಿದುಕೊಂಡ ಮೇಲೆ ಪಾರ್ಥಿವ ಶರೀರವನ್ನು ಯೋಸೇಫನಿಗೆ ಒಪ್ಪಿಸಿದನು.
46 Joseph bought linen, took the body down, wrapped it in the cloth, and laid it in a tomb cut from rock. Then he rolled a stone against the tomb's entrance. ಅವನು ಶುಭ್ರವಾದ ನಾರುಬಟ್ಟೆಯನ್ನು ಕೊಂಡುಕೊಂಡು ಬಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ಆ ನಾರುಬಟ್ಟೆಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಯೇಸುವಿನ ಸಮಾಧಿಯ ದ್ವಾರಕ್ಕೆ ಒಂದು ಬಂಡೆಯನ್ನು ಉರುಳಿಸಿದನು.
47 Mary Magdalene and Mary the mother of Joses saw where he was laid. ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿಯಾದ ಮರಿಯಳು ಯೇಸುವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]