1Our Father spoke to Moses and Aaron, saying:OKCVಯೆಹೋವ ದೇವರು ಮೋಶೆ ಮತ್ತು ಆರೋನರೊಡನೆ ಮಾತನಾಡಿ ಹೇಳಿದ್ದೇನೆಂದರೆ,
2"When someone has a swelling, rash, or bright spot on their skin that turns into a skin disease, he must be brought to Aaron the priest or one of his priest sons.OKCV“ಒಬ್ಬ ಮನುಷ್ಯನು ತನ್ನ ಚರ್ಮದ ಮೇಲೆ ಬಾವಾಗಲಿ, ಕಜ್ಜಿಯಾಗಲಿ, ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಚರ್ಮದಲ್ಲಿ ಕುಷ್ಠದ ವ್ಯಾಧಿಯಂತಿದ್ದರೆ, ಅವನು ಯಾಜಕನಾದ ಆರೋನನ ಬಳಿಗಾದರೂ ಇಲ್ಲವೆ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗಾದರೂ ಕರೆದುಕೊಂಡು ಬರಬೇಕು.
3The priest examines the mark on the skin. If the hair in it has turned white and it looks deeper than the skin, it is a contaminating skin disease; the priest examines him and declares him unclean.OKCVಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
4But if the bright spot on his skin is white, not deeper than the skin, and its hair hasn't turned white, the priest must isolate the person seven days.OKCVಅವನ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು, ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದು, ಅಲ್ಲಿನ ಕೂದಲು ಬೆಳ್ಳಗಾಗದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಪ್ರತ್ಯೇಕವಾಗಿ ಇರಿಸಬೇಕು.
5On the seventh day the priest examines him; if the mark hasn't changed or spread on the skin, he isolates him seven more days.OKCVಯಾಜಕನು ಏಳನೆಯ ದಿನದಲ್ಲಿ ಅವನನ್ನು ಪರೀಕ್ಷಿಸಿದಾಗ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ, ಆ ವ್ಯಾಧಿ ಚರ್ಮದಲ್ಲಿ ಹರಡಿರದಿದ್ದರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
6On the seventh day the priest examines him again. If the sore faded and didn't spread on the skin, he declares him clean—just a rash. He washes his clothes and is clean.OKCVಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ವ್ಯಾಧಿಯು ಸ್ವಲ್ಪ ಕಪ್ಪಾಗಿದ್ದು, ಚರ್ಮದಲ್ಲೆಲ್ಲಾ ಹರಡಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರುವನು.
7But if the rash spreads on his skin after showing himself to the priest for cleansing, he must show himself to the priest again.OKCVಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ, ಅವನು ತಿರುಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
8The priest examines him: if the rash has spread on the skin, he declares him unclean—it is a skin disease.OKCVಯಾಜಕನು ಅದನ್ನು ಪರೀಕ್ಷಿಸಿದಾಗ, ಕಜ್ಜಿಯ ಚರ್ಮವೇ ಹರಡಿರುವುದಾದರೆ ಆಗ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಏಕೆಂದರೆ ಅದು ಚರ್ಮರೋಗವಾಗಿರುವುದು.
9"When a defiling skin disease appears on someone, he is to be brought to the priest.OKCV“ಚರ್ಮರೋಗವು ಮನುಷ್ಯನಲ್ಲಿ ಇರುವುದಾದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
10The priest examines him: if a white swelling on the skin has turned the hair white, with raw flesh in it.OKCVಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,
11It is a chronic skin disease; the priest will pronounce him unclean. He must not isolate him, since he is unclean.OKCVಅದು ಅವನ ಚರ್ಮದಲ್ಲಿ ದೀರ್ಘಕಾಲದ ಚರ್ಮರೋಗವಾಗಿರುವುದು. ಆಗ ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು ಮತ್ತು ಅವನನ್ನು ಪ್ರತ್ಯೇಕವಾಗಿ ಇರಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
12"But if the disease breaks out and covers all his skin, head to foot, wherever the priest looks,OKCV“ಒಬ್ಬನಲ್ಲಿ ಸಾಂಕ್ರಾಮಿಕ ಚರ್ಮರೋಗ ಹತ್ತಿದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಪಾದದವರೆಗೂ ಹರಡಿವುದುನ್ನು ಯಾಜಕನು ಪರೀಕ್ಷಿಸಿದರೆ,
13the priest examines him; if the disease covers his whole body, he pronounces him clean—since it's all turned white, he is clean.OKCVಆಗ ಯಾಜಕನು ಅದನ್ನು ಗಮನಿಸಬೇಕು. ತೊನ್ನು ಹತ್ತಿದರೆ, ಅವನ ಮೈಯೆಲ್ಲವನ್ನು ಹರಡಿಕೊಂಡಿದ್ದರೆ, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವುದರಿಂದ ಅವನು ಶುದ್ಧನಾಗಿರುವನು.
14But on the day raw flesh appears on him, he is to be unclean.OKCVಆದರೆ ಹಸಿ ಮಾಂಸವು ಅವನಲ್ಲಿ ಕಾಣಿಸಿಕೊಂಡರೆ ಅವನು ಅಶುದ್ಧನಾಗಿರುವನು.
15The priest sees the raw flesh and pronounces him unclean; the raw flesh is unclean—a skin disease.OKCVಯಾಜಕನು ಹಸಿ ಮಾಂಸವನ್ನು ಪರೀಕ್ಷಿಸಿ ಅವನು ಅಶುದ್ಧನೆಂದು ನುಡಿಯಬೇಕು. ಏಕೆಂದರೆ ಹಸಿ ಮಾಂಸವು ಅಶುದ್ಧವಾದದ್ದು, ಅದು ಅಶುದ್ಧಗೊಳಿಸುವ ಚರ್ಮರೋಗವೇ.
16But if the raw flesh changes and turns white, he is to come to the priest.OKCVಹಸಿ ಮಾಂಸವು ಮತ್ತೆ ಬದಲಾಗಿ ಬೆಳ್ಳಗಾದರೆ, ಅವನು ಯಾಜಕನ ಬಳಿಗೆ ಬರಬೇಕು.
17The priest examines him; if the mark has turned white, he declares him clean—he is clean.OKCVಆಗ ಯಾಜಕನು ಅವನನ್ನು ಪರೀಕ್ಷಿಸಿ, ಆ ವ್ಯಾಧಿಯು ಬೆಳ್ಳಗಾಗಿದ್ದರೆ, ಯಾಜಕನು, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅವನು ಶುದ್ಧನಾಗಿರುವನು.
18"When someone has a boil on their skin and it heals,OKCV“ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
19if a white swelling or reddish-white bright spot forms on the boil, show it to the priest.OKCVಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.
20The priest examines it; if it looks lower than the skin and the hair has turned white, he pronounces him unclean—a skin disease has broken out in the boil.OKCVಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು.
21But if the priest sees no white hair in it, it is not below the skin, and has faded, he is to isolate him seven days.OKCVಆದರೆ ಯಾಜಕನು ಅದನ್ನು ಪರೀಕ್ಷಿಸಲು, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದಿದ್ದರೆ ಮತ್ತು ಸ್ವಲ್ಪ ಮಬ್ಬಾಗಿದ್ದರೆ, ಆಗ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
22If it spreads further on the skin, the priest declares him unclean; it is diseased.OKCVಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು. ಅದು ಚರ್ಮರೋಗವಾಗಿದೆ.
23But if the bright spot stays put, hasn't spread, it's the scar of the boil, and the priest must pronounce him clean.OKCVಆದರೆ ಆ ಹೊಳಪಾದ ಕಲೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು, ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
24"Or when skin has a fire burn, and the burn's raw flesh becomes a reddish-white or white bright spot,OKCV“ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಸಹ ಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಕಲೆಯಾಗಿದ್ದರೆ,
25the priest examines it: if hair in the bright spot turned white and it looks deeper than the skin, it is a skin disease broken out in the burn—he declares him unclean; it is a skin disease.OKCVಯಾಜಕನು ಅದನ್ನು ಪರೀಕ್ಷಿಸಬೇಕು. ಆ ಹೊಳಪಾದ ಕಲೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆಯಿಂದ ಒಡೆದ ಚರ್ಮರೋಗವಾಗಿರುವುದು. ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಚರ್ಮವ್ಯಾಧಿಯಾಗಿದೆ.
26If the priest examines it and finds no white hair in the bright spot, and it's no deeper than the skin but faded, he is to isolate him seven days.OKCVಆದರೆ ಯಾಜಕನು ಅದನ್ನು ಪರೀಕ್ಷಿಸಿದಾಗ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೋಟಾಗಿದ್ದರೆ, ಯಾಜಕನು ಆಗ ಅವನನ್ನು ಏಳು ದಿನಗಳ ಕಾಲ ಮುಚ್ಚಿಡಬೇಕು.
27On day seven the priest examines him. If it spread on the skin, the priest pronounces him unclean—a defiling skin disease.OKCVಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ಚರ್ಮರೋಗ.
28But if the bright spot stays in place, hasn't spread on the skin, and has faded, it's the burn's swelling; the priest is to declare him clean—it is only the burn's scar.OKCVಆ ಹೊಳಪಾದ ಕಲೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮಬ್ಬಾಗಿದ್ದರೆ, ಬೆಂಕಿ ಸುಟ್ಟ ಬೊಬ್ಬೆಯ ಊತವೆಂದು ಮತ್ತು ಅವನು ಶುದ್ಧನೆಂದು ಯಾಜಕನು ನುಡಿಯಬೇಕು. ಏಕೆಂದರೆ ಅದು ಬೆಂಕಿಯ ಬೊಬ್ಬೆಯಾಗಿರುವುದು.
29"When a man or a woman has a mark on the head or in the beard,OKCV“ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ವ್ಯಾಧಿಯು ತಲೆಯ ಮೇಲಾಗಲಿ, ಗಡ್ಡದ ಮೇಲಾಗಲಿ ಕಲೆ ಇದ್ದರೆ,
30the priest examines the mark; if deeper than the skin, with thin yellow hair, he pronounces them unclean—an itch, a skin disease of the head or beard.OKCVಆಗ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಬೇಕು. ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ತಲೆಯ ಮೇಲಾಗಲಿ ಇಲ್ಲವೆ ಗಡ್ಡದ ಮೇಲಾಗಲಿ ಇರುವ ಚರ್ಮರೋಗವಾಗಿದೆ.
31But if the priest examines the itch mark and it looks no deeper than the skin and has no black hair in it, the priest is to isolate the person for seven days.OKCVಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು.
32On the seventh day the priest examines the mark: if the itch hasn't spread, has no yellow hair, and looks no deeper than the skin.OKCVಏಳನೆಯ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಿದಾಗ, ಆ ಇಸಬು ಹರಡದೆ ಮತ್ತು ಅದರಲ್ಲಿ ಹಳದಿ ಕೂದಲು ಇರದೆ, ಆ ಇಸಬು ಮಿಕ್ಕ ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ,
33The man is to shave, but not the sore area; the priest isolates him another seven days.OKCVಅವನು ಕ್ಷೌರ ಮಾಡಿಸಿಕೊಳ್ಳಲಿ. ಆದರೆ ಅವನು ಇಸಬನ್ನು ಕ್ಷೌರ ಮಾಡಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
34On the seventh day the priest examines the itch. If it hasn't spread on the skin and looks no deeper than the skin, the priest declares him clean. He washes his clothes and is clean.OKCVಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಆ ಇಸಬು ಚರ್ಮದಲ್ಲಿ ಹರಡಿರದಿದ್ದರೆ ಇಲ್ಲವೆ ನೋಡಲು ಅದು ಮಿಕ್ಕ ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ, ಯಾಜಕನು ಆಗ ಅವನನ್ನು ಶುದ್ಧನೆಂದು ನುಡಿಯಬೇಕು, ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರಬೇಕು.
35But if the itch spreads further on the skin after his cleansing,OKCVಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿರದಿದ್ದರೆ,
36the priest examines him; if the itch spread on the skin, the priest need not look for yellow hair—the man is unclean.OKCVಯಾಜಕನು ಆಗ ಅವನನ್ನು ಪರೀಕ್ಷಿಸಬೇಕು, ಆ ಇಸಬು ಚರ್ಮದಲ್ಲಿ ಹರಡಿದ್ದರೆ, ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ. ಅವನು ಅಶುದ್ಧನು.
37But if the priest sees it unchanged, with black hair grown in it, it's healed; he's clean—the priest pronounces him clean.OKCVಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಮತ್ತು ಅದರಲ್ಲಿ ಕಪ್ಪುಕೂದಲು ಬೆಳೆದರೆ, ಇಸಬು ವಾಸಿಯಾಗಿ ಅವನು ಶುದ್ಧನಾಗುವನು, ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
38"When a man or a woman has white bright spots on their skin,OKCV“ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ದೇಹದ ಚರ್ಮದಲ್ಲಿ ಬಿಳಿಯ ಹೊಳಪಾದ ಮಚ್ಚೆಗಳು ಅಲ್ಲಲ್ಲಿ ಇದ್ದರೆ,
39the priest examines them; if the bright spots on their skin are dull white, it is a harmless rash that has broken out on the skin; he is clean.OKCVಅವುಗಳನ್ನು ಯಾಜಕನು ಪರೀಕ್ಷಿಸಬೇಕು, ಅವರ ದೇಹದ ಚರ್ಮದಲ್ಲಿ ಹೊಳಪಾದ ಕಲೆಗಳು ಮಬ್ಬಾಗಿ ಬಿಳುಪಾಗಿದ್ದರೆ, ಅದು ಚರ್ಮದ ಮೇಲೆ ಬಿಸಿಲಿನಿಂದಾದ ಕೆಂಪು ಮಚ್ಚೆಯಾಗಿರುವುದು. ಅವನು ಶುದ್ಧನಾಗಿರುವನು.
40"When a man loses the hair on his head, he is bald, but he is clean.OKCV“ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.
41If hair falls from the front of his head, his forehead is bald, but he is clean.OKCVಮುಂದಲೆಯ ಭಾಗದಲ್ಲಿ ಕೂದಲು ಉದುರಿ ಹೋಗಿದ್ದರೆ, ಅವನು ಪಟ್ಟೆ ತಲೆಯವನು, ಆದರೂ ಅವನು ಶುದ್ಧನಾಗಿರುವನು.
42But if a reddish-white sore is on his bald head or forehead, it is a skin disease breaking out on his bald head or forehead.OKCVಆದರೆ ಆ ಬೋಳು ತಲೆಯಲ್ಲಿ ಇಲ್ಲವೆ ಪಟ್ಟೆ ತಲೆಯಲ್ಲಿ ಕೆಂಪಗಿರುವ ಬಿಳುಪಾದ ಮಚ್ಚೆಯಿದ್ದರೆ, ಅದು ಅವನ ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆ ತಲೆಯಲ್ಲಾಗಲಿ ಹುಟ್ಟುತ್ತಿರುವ ಚರ್ಮರೋಗವೇ.
43The priest examines him; if a reddish-white swelling is on his bald head or forehead, like skin disease on the body's skin.OKCVಆಗ ಯಾಜಕನು ಅವನನ್ನು ಪರೀಕ್ಷಿಸಬೇಕು. ಅವನ ಬೋಳು ತಲೆಯಲ್ಲಾಗಲಿ, ಇಲ್ಲವೆ ಅವನ ಪಟ್ಟೆ ತಲೆಯಲ್ಲಾಗಲಿ ಏಳುತ್ತಿರುವ ಆ ಕಲೆಯು ಬಿಳುಪಾಗಿ ಕೆಂಪಾಗಿದ್ದರೆ ಮತ್ತು ಮಾಂಸದ ತೊಗಲಿನಲ್ಲಿ ಇರುವ ಚರ್ಮರೋಗದ ಹಾಗಿದ್ದರೆ, ಅವನು ರೋಗಿ ಎಂದೂ ಅಶುದ್ಧನೆಂದೂ
44A man with a skin disease is unclean; the priest must declare him unclean, his mark on his head.OKCVಅವನ ವ್ಯಾಧಿಯು ಅವನ ತಲೆಯಲ್ಲಿ ಕಾಣಿಸಿದ್ದರಿಂದ ಅವನು ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
45"Anyone with the skin disease must wear torn clothes, let their hair hang loose, cover their upper lip, and cry, 'Unclean, unclean!'OKCV“ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.
46While the mark remains, they are unclean—unclean; they must live alone, outside the camp.OKCVಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
47"When a garment has a mark of mildew in it, whether a wool or a linen garment,OKCV“ಬೂಜು ಚರ್ಮರೋಗದ ಗುರುತು ಅವನ ಉಡುಪಿನಲ್ಲೂ ಇದ್ದು, ಅದು ಉಣ್ಣೆಯ ಉಡುಪಾಗಲಿ ಇಲ್ಲವೆ ನಾರಿನ ಉಡುಪಾಗಲಿ,
48in fabric of linen or wool, woven or knitted, or in leather or anything of leather,OKCVನಾರಿನ ಇಲ್ಲವೆ ಉಣ್ಣೆಯ ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ಚರ್ಮದಲ್ಲಾಗಲಿ, ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಇದಲ್ಲದೆ ಹಸುರಾಗಿ ಇಲ್ಲವೆ,
49if a mark on garment, leather, warp, or weft, or any leather article, is greenish or reddish, it is mildew and must be shown to the priest.OKCVಆ ಬಟ್ಟೆ ತೊಗಲು ಹಾಸು ಇಲ್ಲವೆ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ, ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಬೂಜಾಗಿದೆ. ಅದನ್ನು ಯಾಜಕನಿಗೆ ತೋರಿಸಬೇಕು.
50The priest is to examine the mark and isolate the affected article for seven days.OKCVಯಾಜಕನು ಅದನ್ನು ಪರೀಕ್ಷಿಸಿ, ಆ ವಸ್ತುವನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
51On the seventh day he examines the mark. If it has spread in the garment, warp or weft, or in leather or anything made of leather, it is destructive mildew—unclean.OKCVಅವನು ಏಳನೆಯ ದಿನದಲ್ಲಿ ಅದನ್ನು ಪರೀಕ್ಷಿಸಬೇಕು. ಆ ಬೂಜು ಅವನ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಹರಡಿದ್ದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದು ಅಶುದ್ಧವು.
52Burn the garment—warp or weft, wool or linen—or any leather article with the mark, for it is a destructive mildew; burn it in the fire.OKCVಆದ್ದರಿಂದ ಅವನು ಆ ಉಡುಪುಗಳನ್ನು ಅಂದರೆ ಅದು ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಎಲ್ಲಿ ಬೂಜಿದೆಯೋ ಅದನ್ನು ಸುಡಬೇಕು. ಏಕೆಂದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದನ್ನು ಬೆಂಕಿಯಿಂದ ಸುಡಬೇಕು.
53"But if the priest examines it and the sore hasn't spread in the garment, or warp, or weft, or any leather article,OKCV“ಯಾಜಕನು ಪರೀಕ್ಷಿಸಿದಾಗ ಬೂಜು ಉಡುಪಿನಲ್ಲಾಗಲಿ, ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ತೊಗಲಿನ ವಸ್ತುಗಳಲ್ಲಾಗಲಿ ಹರಡದಿದ್ದರೆ,
54the priest will order the marked article washed, and isolate it another seven days.OKCVಆಗ ಯಾಜಕನು ಆ ಬೂಜುಳ್ಳ ವಸ್ತುವನ್ನು ತೊಳೆಯುವಂತೆ ಆಜ್ಞಾಪಿಸಿ, ಅದನ್ನು ಅವನು ಏಳು ದಿನಗಳ ಕಾಲ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
55After the affected fabric is washed, the priest examines it. If the mark's look hasn't changed, though it hasn't spread, it is unclean. Burn it in the fire—it is a corroding spot, inside or outside.OKCVಅದನ್ನು ತೊಳೆದಾದ ಮೇಲೆ ಯಾಜಕನು ಆ ಬೂಜನ್ನು ಪರೀಕ್ಷಿಸಬೇಕು. ಆ ಬೂಜು ಬಣ್ಣವನ್ನು ಬದಲಾಯಿಸದಿದ್ದರೆ ಮತ್ತು ಹರಡದಿದ್ದರೆ ಅದು ಅಶುದ್ಧವಾಗಿರುವುದು. ಅದನ್ನು ನೀನು ಬೆಂಕಿಯಿಂದ ಸುಡಬೇಕು. ಅದು ಒಳಗಿನಿಂದಾಗಲಿ ಇಲ್ಲವೆ ಹೊರಗಿನಿಂದಾಗಲಿ ವ್ಯಾಪಿಸಿದೆ.
56If the priest sees the mark has faded after washing, he must tear it from the garment, leather, or woven or knitted material.OKCVಯಾಜಕನು ಅದನ್ನು ಪರೀಕ್ಷಿಸಿದರೆ, ಆ ಬೂಜು ಹಿಡಿದ ವಸ್ತುವನ್ನು ತೊಳೆದ ನಂತರ ಮಬ್ಬಾಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ, ಚರ್ಮದಿಂದಾಗಲಿ, ಹಾಸಿನಿಂದಾಗಲಿ, ಹೊಕ್ಕಿನಿಂದಾಗಲಿ ಹರಿದುಹಾಕಬೇಕು.
57If it reappears in the garment, woven or knitted, or any leather, it's spreading; burn what has the mark in fire.OKCVಆದರೆ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನಲ್ಲಾಗಲಿ ಕಂಡು ಬಂದರೆ ಅದು ಹರಡುವ ಬೂಜು ಮತ್ತು ಬೂಜಿರುವ ವಸ್ತುವನ್ನು ನೀನು ಬೆಂಕಿಯಿಂದ ಸುಡಬೇಕು.
58But if the mark leaves the garment, warp, weft, or leather item you washed, wash it again—it is clean.OKCVನೀನು ತೊಳೆದ ಮೇಲೆ ಆ ಬೂಜು ಯಾವ ವಸ್ತುವಿನಿಂದ ಹೊರಟು ಹೋಯಿತೋ, ಆ ಬಟ್ಟೆಯನ್ನೂ, ಹಾಸನ್ನೂ, ಹೊಕ್ಕನ್ನೂ ಇಲ್ಲವೆ ಚರ್ಮದ ಯಾವುದೇ ಸಾಮಗ್ರಿಗಳನ್ನೂ ಎರಡನೆಯ ಸಾರಿ ತೊಳೆಯಬೇಕು. ಆಗ ಅದು ಶುದ್ಧವಾಗಿರುವುದು.”
59"This is the law for a mildew mark on a wool or linen garment, warp or weft, or any leather item—to pronounce it clean or unclean."OKCVಉಣ್ಣೆ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಬೂಜು ಹಿಡಿದಿದ್ದರೆ ಪಾಲಿಸತಕ್ಕ ನಿಯಮಗಳಿವು. ಅದನ್ನು ಶುದ್ಧವೆಂದು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇದೇ.