Skip to content
The Believer's Library

Biblica® Open Kannada Contemporary Version 2022

Genesis 27 OKCV

Show OKCV only
Verse × ×
1 When Isaac grew old and his eyes were too dim to see, he called Esau his older son and said, "My son." "Here I am," he answered. ಇಸಾಕನು ಮುದುಕನಾಗಿ ನೋಡುವುದಕ್ಕಾಗದಷ್ಟು ಅವನ ಕಣ್ಣುಗಳು ಮಬ್ಬಾದಾಗ, ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು ಅವನಿಗೆ, “ನನ್ನ ಮಗನೇ,” ಎಂದನು. ಅವನು ಇಸಾಕನಿಗೆ, “ಇದ್ದೇನೆ,” ಎಂದನು.
2 Isaac said, "Look—I am old; I do not know the day of my death. ಆಗ ಇಸಾಕನು, “ಇಗೋ, ಈಗ ನಾನು ಮುದುಕನಾಗಿದ್ದೇನೆ. ನನ್ನ ಸಾವಿನ ದಿನವನ್ನು ಅರಿಯೆನು.
3 Now take your gear—quiver and bow—go out to the field and hunt game for me. ಆದ್ದರಿಂದ ಈಗ ನೀನು ನಿನ್ನ ಆಯುಧಗಳನ್ನೂ, ಬಿಲ್ಲುಬತ್ತಳಿಕೆಯನ್ನೂ, ತೆಗೆದುಕೊಂಡು ಅಡವಿಗೆ ಹೋಗಿ ನನಗೋಸ್ಕರ ಬೇಟೆಯ ಮಾಂಸವನ್ನೂ,
4 Then make me the tasty food I love, bring it to eat, so my soul may bless you before I die." ನಾನು ಇಷ್ಟಪಡುವ ರುಚಿಯಾದ ಊಟವನ್ನೂ ಸಿದ್ಧಮಾಡಿ ತೆಗೆದುಕೊಂಡು ಬಾ. ಆಗ ಸಾಯುವುದಕ್ಕಿಂತ ಮುಂಚೆ ನಾನು ನಿನ್ನನ್ನು ಆಶೀರ್ವದಿಸುವಂತೆ ಅದನ್ನು ಊಟಮಾಡುವೆನು,” ಎಂದನು.
5 Rebekah listened as Isaac spoke to his son Esau. Esau went out to the field to hunt game and bring it back. ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ್ದನ್ನು ರೆಬೆಕ್ಕಳು ಕೇಳಿಸಿಕೊಂಡಳು. ಏಸಾವನು ಬೇಟೆಯಾಡಿ ಅದನ್ನು ತರುವುದಕ್ಕಾಗಿ ಅಡವಿಗೆ ಹೋದನು.
6 Rebekah said to her son Jacob, "I heard your father tell your brother Esau, ಆಗ ರೆಬೆಕ್ಕಳು ತನ್ನ ಮಗ ಯಾಕೋಬನಿಗೆ, “ನಿನ್ನ ತಂದೆ ನಿನ್ನ ಸಹೋದರ ಏಸಾವನಿಗೆ,
7 'Bring me game, make me a tasty meal to eat, so I may bless you before our Father before I die.' ‘ನನಗೋಸ್ಕರ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಂದು, ನಾನು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಬಾ, ಆಗ ನಾನು ಸಾಯುವುದಕ್ಕಿಂತ ಮುಂಚೆ ಊಟಮಾಡಿ, ಯೆಹೋವ ದೇವರ ಸನ್ನಿಧಿಯಲ್ಲಿ ನಿನ್ನನ್ನು ಆಶೀರ್ವದಿಸುವೆನು,’ ಎಂದು ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ.
8 Now then, my son, listen to my voice and do exactly what I tell you. ಆದ್ದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು.
9 Go to the flock and get me two good young goats from there, so I can make your father tasty food, just as he loves. ನೀನು ಮಂದೆಯ ಬಳಿಗೆ ಹೋಗಿ, ಅಲ್ಲಿಂದ ಎರಡು ಒಳ್ಳೆಯ ಮೇಕೆಯ ಮರಿಗಳನ್ನು ತೆಗೆದುಕೊಂಡು ಬಾ. ನಿನ್ನ ತಂದೆಗೋಸ್ಕರ ನಾನು ಅವುಗಳನ್ನೂ, ಅವನು ಇಷ್ಟಪಡುವ ರುಚಿಯಾದ ಅಡಿಗೆಯನ್ನೂ ಸಿದ್ಧಮಾಡುತ್ತೇನೆ.
10 Then take it to your father to eat, so that he may bless you before he dies." ನೀನು ಅದನ್ನು ನಿನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನು ಆಶೀರ್ವದಿಸುವಂತೆ ಊಟಮಾಡಲಿ,” ಎಂದಳು.
11 Jacob said to his mother Rebekah, "Look, Esau my brother is a hairy man, and I'm smooth. ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಸಹೋದರ ಏಸಾವನು ರೋಮವುಳ್ಳವನಾಗಿದ್ದಾನೆ, ನಾನು ನುಣುಪಾದ ಚರ್ಮವುಳ್ಳವನಾಗಿದ್ದೇನೆ.
12 What if my father feels me? I'll seem a deceiver to him, and bring on myself a curse, not a blessing." ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ, ನನ್ನ ಗತಿಯೇನು? ನಾನು ಅವನಿಗೆ ಮೋಸಮಾಡುವವನಾಗಿ ಕಂಡು ಬಂದು, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು,” ಎಂದನು.
13 His mother said, "My son, let your curse fall on me—just listen to my voice: go, bring them to me." ಅವನ ತಾಯಿಯು ಅವನಿಗೆ, “ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ, ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ, ಅವುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು.
14 So Jacob went, took the goats, and brought them to his mother, who made the tasty food his father loved. ಆಗ ಯಾಕೋಬನು ಹೋಗಿ ಅವುಗಳನ್ನು ಹಿಡಿದು ತೆಗೆದುಕೊಂಡು ತನ್ನ ತಾಯಿಗೆ ತಂದುಕೊಟ್ಟನು. ಅವನ ತಾಯಿಯು, ಅವನ ತಂದೆಯು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಸಿದ್ಧಮಾಡಿದಳು.
15 Then Rebekah took Esau her older son's best clothes, kept with her in the house, and dressed Jacob her younger son. ತರುವಾಯ ರೆಬೆಕ್ಕಳು ಮನೆಯಲ್ಲಿದ್ದ ತನ್ನ ಹಿರಿಯ ಮಗನಾದ ಏಸಾವನ ಒಳ್ಳೆಯ ವಸ್ತ್ರವನ್ನು ತೆಗೆದುಕೊಂಡು, ತನ್ನ ಕಿರಿಯ ಮಗ ಯಾಕೋಬನಿಗೆ ಉಡಿಸಿದಳು.
16 She covered his hands and smooth neck with the goat skins. ಇದಲ್ಲದೆ ಮೇಕೆಯ ಮರಿಗಳ ಚರ್ಮಗಳನ್ನು ಅವನ ಕೈಗಳ ಮೇಲೆಯೂ, ನುಣುಪಾದ ಅವನ ಕೊರಳಿನ ಮೇಲೆಯೂ ಕಟ್ಟಿದಳು.
17 Then she handed her son Jacob the tasty meal and the bread she had made. ತರುವಾಯ ತಾನು ಸಿದ್ಧಮಾಡಿದ ರುಚಿಯಾದ ಊಟವನ್ನೂ, ರೊಟ್ಟಿಯನ್ನೂ ತನ್ನ ಮಗ ಯಾಕೋಬನ ಕೈಯಲ್ಲಿ ಕೊಟ್ಟಳು.
18 Jacob came to his father and said, "My father." He said, "Here I am. Who are you, my son?" ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ, “ನನ್ನ ತಂದೆಯೇ,” ಎಂದನು. ಅದಕ್ಕೆ ಅವನು, “ನೀನು ಯಾರು?” ಎಂದನು.
19 Jacob said to his father, "I am Esau, your firstborn. I've done as you told me. Please sit up and eat my game, so your soul may bless me." ಯಾಕೋಬನು ತನ್ನ ತಂದೆಗೆ, “ನಾನು ನಿನ್ನ ಹಿರಿಯ ಮಗ ಏಸಾವನು. ನೀನು ನನಗೆ ಹೇಳಿದಂತೆ ಮಾಡಿದ್ದೇನೆ, ಎದ್ದು ಕುಳಿತುಕೋ. ನೀನು ನನ್ನನ್ನು ಆಶೀರ್ವದಿಸುವಂತೆ ನನ್ನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು.
20 Isaac asked his son, "How did you find it so fast, my son?" He said, "Because your Father granted me success." ಇಸಾಕನು ತನ್ನ ಮಗನಿಗೆ, “ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು?” ಎಂದನು. ಅವನು, “ನಿನ್ನ ದೇವರಾದ ಯೆಹೋವ ದೇವರು ನನ್ನೆದುರಿಗೆ ಅದು ಬರುವಂತೆ ಮಾಡಿದರು,” ಎಂದನು.
21 Isaac said to Jacob, "Please come closer, my son, so I can feel you, to know whether you really are my son Esau or not." ಆಗ ಇಸಾಕನು ಯಾಕೋಬನಿಗೆ, “ನನ್ನ ಮಗನೇ, ನೀನೇ ನನ್ನ ಮಗ ಏಸಾವನು ಹೌದೋ, ಅಲ್ಲವೋ ಎಂದು ನಾನು ನಿನ್ನನ್ನು ಮುಟ್ಟಿನೋಡುವಂತೆ ಹತ್ತಿರ ಬಾ,” ಎಂದನು.
22 Jacob went to his father Isaac, who felt him and said, "The voice is Jacob's voice, but the hands are Esau's hands." ಆಗ ಯಾಕೋಬನು ತನ್ನ ತಂದೆ ಇಸಾಕನ ಹತ್ತಿರ ಬಂದನು. ಇಸಾಕನು ಅವನನ್ನು ಮುಟ್ಟಿ, “ಸ್ವರವು ಯಾಕೋಬನ ಸ್ವರವಾಗಿದೆ, ಆದರೆ ಕೈಗಳು ಏಸಾವನ ಕೈಗಳು,” ಎಂದು ಹೇಳಿದನು.
23 Isaac didn't recognize him, since Jacob's hands were as hairy as his brother Esau's hands, so Isaac blessed him. ಅವನ ಕೈಗಳು ಅವನ ಅಣ್ಣ ಏಸಾವನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ, ಅವನು ಯಾರೆಂದು ತಿಳಿಯದೆ, ಅವನನ್ನು ಆಶೀರ್ವದಿಸಿದನು.
24 He asked, "Are you really my son Esau?" And he said, "I am." ಮತ್ತೆ ಅವನು, “ನೀನು ನನ್ನ ಮಗ ಏಸಾವನೋ?” ಎಂದಾಗ. ಯಾಕೋಬನು, “ನಾನೇ,” ಎಂದನು.
25 Isaac said, "Serve me my son's game, so my soul may bless you." Jacob served him, and he ate; he brought him wine, and he drank. ಆಗ ಇಸಾಕನು, “ನನ್ನ ಮಗನೇ, ನೀನು ತಂದದ್ದನ್ನು ಕೊಡು, ಊಟಮಾಡಿ, ನಿನ್ನನ್ನು ಆಶೀರ್ವದಿಸುವೆನು,” ಎಂದನು. ಆಗ ಯಾಕೋಬನು ಅದನ್ನು ಹತ್ತಿರ ತೆಗೆದುಕೊಂಡು ಬಂದಾಗ ಅವನು ಊಟಮಾಡಿದನು. ಅವನು ದ್ರಾಕ್ಷಾರಸವನ್ನು ತಂದಾಗ, ಅದನ್ನು ಕುಡಿದನು.
26 Then his father Isaac said to him, "Come closer, my son, and kiss me." ಅವನ ತಂದೆ ಇಸಾಕನು ಅವನಿಗೆ, “ನನ್ನ ಮಗನೇ, ಹತ್ತಿರ ಬಂದು ನನಗೆ ಮುದ್ದಿಡು,” ಎಂದನು.
27 So Jacob came closer and kissed him. Isaac smelled the scent of his clothes, blessed him, and said, "See—the scent of my son is like the scent of a field that our Father has blessed. ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ, ಅವನನ್ನು ಹೀಗೆ ಆಶೀರ್ವದಿಸಿದನು, “ನನ್ನ ಮಗನ ವಾಸನೆಯು ಯೆಹೋವ ದೇವರು ಆಶೀರ್ವದಿಸಿದ ಹೊಲದ ವಾಸನೆಯಂತೆ ಇದೆ.
28 May our Father give you the dew of heaven and the richness of the earth, and an abundance of grain and new wine. ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ.
29 Let peoples serve you and nations bow to you. Rule your brothers, and let your mother's sons bow to you. Cursed be all who curse you, and blessed all who bless you." ಜನರು ನಿನಗೆ ಸೇವೆಮಾಡಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಆಗಲಿ.”
30 Just as Isaac finished blessing Jacob, and Jacob had barely left his father Isaac's presence, his brother Esau returned from the hunt. ಇಸಾಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ, ಯಾಕೋಬನು ತನ್ನ ತಂದೆ ಇಸಾಕನ ಸಮ್ಮುಖದಿಂದ ಹೊರಟುಹೋದನು. ಆಮೇಲೆ ಅವನ ಸಹೋದರ ಏಸಾವನು ಬೇಟೆಯಿಂದ ಬಂದನು.
31 He also made a tasty dish, brought it to his father, and said to his father, "Let my father get up and eat some of his son's game, so your soul may bless me." ಅವನೂ ಸಹ ರುಚಿಯಾದ ಊಟವನ್ನು ಸಿದ್ಧಮಾಡಿ, ತನ್ನ ತಂದೆಯ ಬಳಿಗೆ ತಂದು, “ನನ್ನ ತಂದೆಯೇ, ಎದ್ದು ನನ್ನನ್ನು ಆಶೀರ್ವದಿಸುವಂತೆ ನಿನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು.
32 His father Isaac asked him, "Who are you?" He said, "I am your son, your firstborn, Esau." ಅವನ ತಂದೆ ಇಸಾಕನು ಅವನಿಗೆ, “ನೀನು ಯಾರು?” ಎಂದಾಗ. ಅವನು, “ನಾನು ನಿನ್ನ ಚೊಚ್ಚಲ ಮಗ ಏಸಾವನು,” ಎಂದನು.
33 Isaac shook violently and said, "Who, then, hunted game and brought it to me? I ate it all before you came and blessed him—yes, blessed he will be!" ಆಗ ಇಸಾಕನು ಬಹಳವಾಗಿ ನಡುಗುತ್ತಾ, “ನೀನು ಬರುವುದಕ್ಕಿಂತ ಮೊದಲು ಬೇಟೆಯಾಡಿ ನನಗೆ ಊಟ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವುದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವದಿಸಿದೆನು. ಅವನು ಆಶೀರ್ವಾದ ಹೊಂದಿರುವನು,” ಎಂದನು.
34 When Esau heard his father's words, he let out a very loud, bitter cry and said to his father, "Bless me too, my father!" ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ, ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ, “ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು,” ಎಂದನು.
35 Isaac said, "Your brother came dishonestly and took your blessing." ಇಸಾಕನು, “ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡಿದ್ದಾನೆ,” ಎಂದನು.
36 Esau said, "Isn't he rightly named Jacob? He's cheated me twice: he took my birthright, and now he's taken my blessing." Then he asked, "Haven't you reserved a blessing for me?" ಅದಕ್ಕೆ ಏಸಾವನು, “ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ? ಅವನು ನನ್ನನ್ನು ಎರಡು ಸಾರಿ ವಂಚಿಸಿದ್ದಾನೆ. ಅವನು ನನ್ನ ಚೊಚ್ಚಲತನವನ್ನು ತೆಗೆದುಕೊಂಡಿದ್ದಾನೆ. ಇಗೋ, ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸಲಿಲ್ಲವೋ?” ಎಂದನು.
37 Isaac answered Esau, "Look, I have made him lord over you, given him all his brothers as servants, and sustained him with grain and new wine. What then can I do for you, my son?" ಇಸಾಕನು ಉತ್ತರವಾಗಿ ಏಸಾವನಿಗೆ, “ಅವನನ್ನು ನಿನಗೆ ದೊರೆಯನನ್ನಾಗಿ ನೇಮಿಸಿದ್ದೇನೆ, ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕರನ್ನಾಗಿ ಕೊಟ್ಟು, ಧಾನ್ಯದಿಂದಲೂ ಹೊಸ ದ್ರಾಕ್ಷಾರಸದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ?” ಎಂದನು.
38 Esau said to his father, "Do you have only one blessing, my father? Bless me too, my father!" Esau wept aloud. ಏಸಾವನು ತನ್ನ ತಂದೆಗೆ, “ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಆಶೀರ್ವದಿಸು,” ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು.
39 Then his father Isaac replied to him, "Look—your dwelling will be away from the richness of the earth, and away from the dew of heaven above. ಆಗ ಅವನ ತಂದೆ ಇಸಾಕನು ಉತ್ತರವಾಗಿ ಅವನಿಗೆ ಹೀಗೆ ಹೇಳಿದನು, “ನಿನ್ನ ನಿವಾಸವು ಭೂಮಿಯ ಐಶ್ವರ್ಯದಿಂದಲೂ ಮೇಲಿನ ಆಕಾಶದಿಂದ ಬೀಳುವ ಮಂಜಿನಿಂದಲೂ ಇರುವುದು.
40 By your sword you will live, and you will serve your brother. But when you grow restless, you will break his yoke from your neck." ನೀನು ಖಡ್ಗದಿಂದಲೇ ಬದುಕುವೆ, ನಿನ್ನ ಸಹೋದರರನ್ನು ನೀನು ಸೇವೆಮಾಡುವೆ, ಆದರೆ ನಿನ್ನ ತಾಳ್ಮೆ ತಪ್ಪಿದಾಗ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದುಹಾಕುವೆ.”
41 Esau bore a grudge against Jacob for the blessing his father gave him, and said to himself, "My father's mourning days are near; then I will kill my brother Jacob." ಏಸಾವನು ತನ್ನ ತಂದೆಯು ಅವನಿಗೆ ಕೊಟ್ಟ ಆಶೀರ್ವಾದಕ್ಕೋಸ್ಕರ ಯಾಕೋಬನನ್ನು ದ್ವೇಷಿಸಿದನು. ಏಸಾವನು, “ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸಮೀಪವಾಗಿವೆ. ತರುವಾಯ ನಾನು ನನ್ನ ಸಹೋದರ ಯಾಕೋಬನನ್ನು ಕೊಲ್ಲುವೆನು,” ಎಂದು ತನ್ನಲ್ಲಿಯೇ ಅಂದುಕೊಂಡನು.
42 Told what her older son Esau had said, Rebekah sent for her younger son Jacob and said, "Your brother Esau is consoling himself over you—he intends to kill you. ರೆಬೆಕ್ಕಳಿಗೆ ತನ್ನ ಹಿರಿಯ ಮಗ ಏಸಾವನ ಬಗ್ಗೆ ಗ್ರಹಿಸಿದಾಗ, ಆಕೆಯು ತನ್ನ ಕಿರಿಯ ಮಗ ಯಾಕೋಬನನ್ನು ಕರೆದು ಅವನಿಗೆ, “ನಿನ್ನ ಸಹೋದರ ಏಸಾವನು ನಿನ್ನನ್ನು ಕೊಂದು, ತನ್ನನ್ನು ಸಂತೈಸಿಕೊಳ್ಳುವುದಕ್ಕಿದ್ದಾನೆ.
43 Now, my son, listen to my voice: get up, flee to my brother Laban in Haran. ಆದ್ದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು. ಎದ್ದು ಹಾರಾನಿನಲ್ಲಿರುವ ನನ್ನ ಸಹೋದರ ಲಾಬಾನನ ಬಳಿಗೆ ಓಡಿಹೋಗು.
44 Stay with him a while—until your brother's fury subsides, ನಿನ್ನ ಸಹೋದರನ ಕೋಪವು ತೀರುವವರೆಗೆ ಕೆಲವು ದಿವಸಗಳು ಅಲ್ಲೇ ಇರು.
45 until your brother's anger turns from you and he forgets what you did to him. Then I'll send and bring you back from there. Why lose both of you in one day?" ನಿನ್ನ ಕಡೆಗಿರುವ ನಿನ್ನ ಸಹೋದರನ ಕೋಪವು ತೀರಿಹೋಗಿ, ನೀನು ಅವನಿಗೆ ಮಾಡಿದ್ದನ್ನು ಅವನು ಮರೆಯುವವರೆಗೆ ನೀನು ಅಲ್ಲೇ ಇರು. ತರುವಾಯ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುವೆನು. ಒಂದೇ ದಿನದಲ್ಲಿ ನಾನು ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದಳು.
46 Rebekah said to Isaac, "I loathe my life because of these Hittite women. If Jacob takes a wife from the daughters of Heth, from this land, why should I live?" ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]