Skip to content
The Believer's Library

Biblica® Open Kannada Contemporary Version 2022

Acts 8 OKCV

Show OKCV only
Verse × ×
1 Saul approved of Stephen's killing. That day a great persecution erupted against the Jerusalem church, scattering everyone except the apostles through Judea and Samaria. ಸೌಲನು ಸ್ತೆಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಯೆರೂಸಲೇಮಿನ ಸಭೆಗೆ ವಿರೋಧವಾಗಿ ಮಹಾಹಿಂಸೆ ಪ್ರಾರಂಭವಾಯಿತು, ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಯೂದಾಯ ಮತ್ತು ಸಮಾರ್ಯ ಪ್ರಾಂತಗಳಿಗೆ ಚದರಿಹೋದರು.
2 Devout men buried Stephen and mourned loudly over him. ದೇವಭಕ್ತರು ಸ್ತೆಫನನ ಶವಸಂಸ್ಕಾರ ಮಾಡಿ, ಅವನಿಗಾಗಿ ಬಹಳ ಗೋಳಾಡಿದರು.
3 But Saul was destroying the church, entering house after house, dragging off men and women, throwing them in prison. ಆದರೆ ಸೌಲನು ಸಭೆಯನ್ನು ಹಾಳುಮಾಡಲು ಪ್ರಾರಂಭಿಸಿದನು. ಅವನು ಮನೆಮನೆಗಳಿಗೆ ಹೋಗಿ ಸ್ತ್ರೀಪುರುಷರನ್ನು ಹೊರಗೆಳೆದು ಅವರನ್ನು ಸೆರೆಮನೆಯಲ್ಲಿ ಹಾಕಿಸಿದನು.
4 So those scattered went everywhere, proclaiming the good news of the word. ಚದರಿಹೋದವರು ತಾವು ಹೋದಲ್ಲೆಲ್ಲಾ ವಾಕ್ಯವನ್ನು ಬೋಧಿಸಿದರು.
5 Philip went down to the city of Samaria and proclaimed Christ to them. ಫಿಲಿಪ್ಪನು ಸಮಾರ್ಯದ ಒಂದು ಪಟ್ಟಣಕ್ಕೆ ಹೋಗಿ ಅಲ್ಲಿ ಕ್ರಿಸ್ತ ಯೇಸುವಿನ ಸಂದೇಶ ಸಾರಿದನು.
6 The crowds paid attention together to Philip's words, hearing and seeing the signs he did. ಜನಸಮೂಹವು ಫಿಲಿಪ್ಪನ ಬೋಧನೆ ಕೇಳಿ, ಅವನು ಮಾಡಿದ ಸೂಚಕಕಾರ್ಯಗಳನ್ನು ಕಂಡು, ಅವನು ಹೇಳಿದ್ದಕ್ಕೆಲ್ಲಾ ಮನಸ್ಸು ಕೊಟ್ಟರು.
7 Unclean spirits came out of many who were possessed, screaming loudly, and many paralyzed and lame were healed. ಅನೇಕರಿಂದ ಅಶುದ್ಧಾತ್ಮಗಳು ಆರ್ಭಟಿಸುತ್ತಾ ಹೊರಗೋಡಿದವು. ಮಾತ್ರವಲ್ಲದೇ ಅನೇಕ ಪಾರ್ಶ್ವವಾಯು ಪೀಡಿತರು, ಅಂಗವಿಕಲರು ಸ್ವಸ್ಥರಾದರು.
8 So there was great joy in that city. ಇದರಿಂದ ಆ ಪಟ್ಟಣದಲ್ಲಿ ಮಹಾ ಸಂತೋಷವಾಯಿತು.
9 A man named Simon had already practiced magic in that city, amazing Samaria's people and claiming to be someone great. ಆ ಪಟ್ಟಣದಲ್ಲಿ ಕೆಲ ಸಮಯದಿಂದ ಸೀಮೋನ ಎಂಬ ಹೆಸರಿನ ಒಬ್ಬನು ಮಂತ್ರ ವಿದ್ಯೆ ಉಪಯೋಗಿಸಿ ಸಮಾರ್ಯದ ಜನರನ್ನು ಆಶ್ಚರ್ಯಗೊಳಿಸಿದ್ದನು. ತಾನೊಬ್ಬ ಮಹಾವ್ಯಕ್ತಿ ಎಂದು ಕೊಚ್ಚಿಕೊಳ್ಳುತ್ತಿದ್ದನು,
10 Everyone, from least to greatest, listened to him, saying, "This man is God's power, called Great." ಆ ಪಟ್ಟಣದಲ್ಲಿಯ ಹಿರಿಯರು, ಕಿರಿಯರು ಎಲ್ಲರೂ ಅವನನ್ನು ಗೌರವಿಸಿ, “ಈ ಮನುಷ್ಯನು ಮಹಾಶಕ್ತಿ ಎನಿಸಿಕೊಂಡ ದೇವರ ಶಕ್ತಿ” ಎಂದು ಹೇಳುತ್ತಿದ್ದರು.
11 They paid attention to him because for a long time he had amazed them with his magic. ಸೀಮೋನನು ತನ್ನ ಮಂತ್ರಶಕ್ತಿಯಿಂದ ಅವರನ್ನು ಆಶ್ಚರ್ಯಗೊಳಿಸಿದ್ದರಿಂದ ಅವರು ಅವನನ್ನು ಹಿಂಬಾಲಿಸುತ್ತಿದ್ದರು.
12 But when they believed Philip's good news about the kingdom of our Father and the name of Jesus Christ, men and women were baptized. ಆದರೆ ಫಿಲಿಪ್ಪನು ದೇವರ ರಾಜ್ಯದ ಶುಭವರ್ತಮಾನವನ್ನೂ ಕ್ರಿಸ್ತ ಯೇಸುವಿನ ಹೆಸರನ್ನೂ ಪ್ರಕಟಿಸಿದಾಗ ಅಲ್ಲಿಯ ಸ್ತ್ರೀ ಪುರುಷರು ಅದನ್ನು ನಂಬಿ ದೀಕ್ಷಾಸ್ನಾನವನ್ನು ಹೊಂದಿದರು.
13 Simon himself believed, was baptized, and stayed close to Philip, amazed at the signs and great miracles he saw. ಸೀಮೋನನು ಸಹ ವಿಶ್ವಾಸವಿಟ್ಟು, ದೀಕ್ಷಾಸ್ನಾನ ಹೊಂದಿದನು. ಫಿಲಿಪ್ಪ ಮಾಡಿದ ಮಹಾಸೂಚಕಕಾರ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡು, ಬೆರಗಾಗಿ ಅವನು ಹೋದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದನು.
14 When the apostles in Jerusalem heard Samaria had received our Father's word, they sent Peter and John to them. ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದರು ಎಂಬ ಸಮಾಚಾರ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ತಲುಪಿದ್ದರಿಂದ, ಅವರ ಬಳಿಗೆ ಪೇತ್ರ ಮತ್ತು ಯೋಹಾನರನ್ನು ಕಳುಹಿಸಿದರು.
15 When they arrived, they prayed for them that they might receive the Holy Spirit, ಇವರು ತಲುಪಿದಾಗ, ಅಲ್ಲಿಯವರು ಪವಿತ್ರಾತ್ಮ ದೇವರನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಾರ್ಥನೆ ಮಾಡಿದರು.
16 for the Holy Spirit had not yet fallen on any of them; they were only baptized into the name of the Lord Jesus. ಏಕೆಂದರೆ ಅವರಲ್ಲಿ ಯಾರ ಮೇಲೆಯೂ ಪವಿತ್ರಾತ್ಮ ಬಂದಿರಲಿಲ್ಲ, ಅವರು ಕರ್ತ ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಹೊಂದಿದ್ದರಷ್ಟೇ.
17 Then they laid their hands on them, and they received the Holy Spirit. ಆಗ ಪೇತ್ರ ಮತ್ತು ಯೋಹಾನರು ಅವರ ಮೇಲೆ ತಮ್ಮ ಕೈಗಳನ್ನಿಡಲು, ಅವರು ಪವಿತ್ರಾತ್ಮ ವರವನ್ನು ಹೊಂದಿದರು.
18 When Simon saw the Spirit given through the apostles' laying on of hands, he offered them money, ಅಪೊಸ್ತಲರು ತಮ್ಮ ಕೈಗಳನ್ನಿಡಲು ಪವಿತ್ರಾತ್ಮ ದೊರೆತದ್ದನ್ನು ಕಂಡ ಸೀಮೋನನು, ಅವರಿಗೆ ಹಣವನ್ನು ಕೊಟ್ಟು,
19 saying, "Give me this power too, so whoever I lay hands on receives the Holy Spirit." “ನಾನು ಯಾರ ಮೇಲೆ ಕೈಗಳನ್ನಿಡುವೆನೋ ಅವರೂ ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಂತೆ ಈ ಶಕ್ತಿಯನ್ನು ಕೊಡಬೇಕು,” ಎಂದು ಕೇಳಿದನು.
20 Peter said to him, "May your silver perish with you, since you thought you could buy our Father's gift with money! ಅದಕ್ಕೆ ಪೇತ್ರನು, “ದೇವರ ವರವನ್ನು ಹಣಕೊಟ್ಟು ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದರಿಂದ ನೀನು ನಿನ್ನ ಹಣದೊಂದಿಗೆ ನಾಶವಾಗಿಹೋಗು!
21 You have no part or share in this matter, for your heart is not right before our Father. ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲವಾದ್ದರಿಂದ ಈ ಸೇವೆಯಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ.
22 So turn from this evil, and pray to our Father that, if possible, your heart's intent may be forgiven you. ಈ ದುಷ್ಟತನಕ್ಕಾಗಿ ಪಶ್ಚಾತ್ತಾಪಪಟ್ಟು ಕರ್ತ ಯೇಸುವನ್ನು ಬೇಡಿಕೋ, ಒಂದು ವೇಳೆ ಅವರು ನಿನ್ನ ಹೃದಯದಲ್ಲಿದ್ದ ಈ ವಿಚಾರವನ್ನು ಕ್ಷಮಿಸಬಹುದು.
23 I see you poisoned by bitterness and bound by evil." ನೀನು ಕಹಿತನದಿಂದ ತುಂಬಿರುವೆ; ಪಾಪ ಬಂಧನದಲ್ಲಿರುವೆ ಎಂದು ಕಾಣುತ್ತಿದ್ದೇನೆ,” ಎಂದನು.
24 Simon answered, "Pray to God for me, that nothing you have said may come upon me." ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.
25 So, having testified and spoken our Lord Jesus's word, they returned to Jerusalem, preaching the good news in many Samaritan villages. ಪೇತ್ರ ಯೋಹಾನರು ಕರ್ತದೇವರ ವಾಕ್ಯದ ಸಾಕ್ಷಿ ಹೇಳಿ ಬೋಧನೆ ಮಾಡಿದ ತರುವಾಯ ಸಮಾರ್ಯದ ಅನೇಕ ಗ್ರಾಮಗಳಲ್ಲಿ ಸುವಾರ್ತೆ ಸಾರಿ, ಯೆರೂಸಲೇಮಿಗೆ ಹಿಂದಿರುಗಿದರು.
26 Then an angel of our Father told Philip, "Get up and go south to the road going down from Jerusalem to Gaza"—a desert road. ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.
27 He got up and went. There was an Ethiopian eunuch, a court official of Candace, queen of the Ethiopians, in charge of all her treasury, who had come to Jerusalem to worship, ಅದರಂತೆ ಅವನು ಹೋಗುತ್ತಿದ್ದಾಗ, ಮಾರ್ಗದಲ್ಲಿ ಐಥಿಯೋಪ್ಯದ ರಾಣಿ ಕಂದಾಕೆಯ ಹಣಕಾಸಿನ ಮುಖ್ಯ ಅಧಿಕಾರಿಯಾಗಿದ್ದ ಕಂಚುಕಿಯನ್ನು ಭೇಟಿಯಾದನು. ಈ ಮನುಷ್ಯನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿದ್ದನು.
28 and was returning, seated in his chariot and reading the prophet Isaiah. ಈಗ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 And the Holy Spirit said to Philip, "Go over and catch up with that chariot." ಆಗ, “ನೀನು ಹೋಗಿ ಆ ರಥದ ಜೊತೆಯಲ್ಲಿಯೇ ನಡೆ,” ಎಂದು ಪವಿತ್ರಾತ್ಮರು ಫಿಲಿಪ್ಪನಿಗೆ ಹೇಳಿದರು.
30 Philip ran up, heard him reading the prophet Isaiah, and asked, "Do you understand what you're reading?" ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?” ಎಂದು ಫಿಲಿಪ್ಪನು ಪ್ರಶ್ನಿಸಿದನು.
31 He said, "How can I, unless someone guides me?" and invited Philip up to sit with him. ಅವನು, “ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.
32 Now the passage of Scripture he was reading was this: "Like a sheep he was led to the slaughter, and like a lamb silent before its shearer, so he did not open his mouth. ಕಂಚುಕಿ ಈ ವಾಕ್ಯಭಾಗವನ್ನು ಓದುತ್ತಿದ್ದನು: “ವಧಿಸಲಿಕ್ಕೆ ಒಯ್ದ ಕುರಿಯಂತೆ ಅವರನ್ನು ಕರೆದುಕೊಂಡು ಹೋದರು. ಉಣ್ಣೆ ಕತ್ತರಿಸುವವರ ಮುಂದೆ ಇರುವ ಕುರಿಮರಿಯಂತೆ ಅವರು ಮೌನವಾಗಿದ್ದರು. ಇನ್ನು ಅವರು ತಮ್ಮ ಬಾಯಿ ತೆರೆಯಲೇ ಇಲ್ಲ.
33 In his humiliation justice was denied him. Who can describe his generation? For his life is taken away from the earth." ಅವರ ಅವಮಾನದಲ್ಲಿ ನ್ಯಾಯವು ಅವರಿಂದ ತೆಗೆಯಲಾಯಿತು. ಭೂಮಿಯಿಂದ ಆತನ ಜೀವವನ್ನು ತೆಗೆದೇಬಿಟ್ಟರಲ್ಲವೇ, ಆತನ ಸಂತತಿಯವರ ಬಗ್ಗೆ ಮಾತನಾಡಬಲ್ಲವರು ಯಾರು?”
34 The eunuch said to Philip, "Tell me, of whom does the prophet say this—himself, or someone else?" ನಂತರ ಕಂಚುಕಿಯು, “ಪ್ರವಾದಿ ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದಾನೆ, ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ? ನನಗೆ ಹೇಳು,” ಎಂದು ಫಿಲಿಪ್ಪನನ್ನು ಕೇಳಿದನು.
35 Philip opened his mouth and, starting from this Scripture, told him the good news about Jesus. ಪವಿತ್ರ ವೇದದ ಆ ಭಾಗದಿಂದಲೇ ಪ್ರಾರಂಭಿಸಿ ಫಿಲಿಪ್ಪನು ಅವನಿಗೆ ಯೇಸುವಿನ ಕುರಿತಾದ ಶುಭವಾರ್ತೆಯನ್ನು ತಿಳಿಸಿದನು.
36 Traveling the road, they reached water, and the eunuch said, "Look, water! What stops me from being baptized?" ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, “ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?” ಎಂದನು.
37 Not in this edition “ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು,” ಎಂದು ಫಿಲಿಪ್ಪನು ಹೇಳಿದನು. “ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ,” ಎಂದು ಕಂಚುಕಿಯು ಪ್ರಕಟಿಸಿದನು.
38 He ordered the chariot to stop; both went down into the water, Philip and the eunuch, and Philip baptized him. ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
39 When they came up out of the water, the Spirit of our Father snatched Philip away; the eunuch never saw him again, but went on his way rejoicing. ಅವರು ನೀರಿನಿಂದ ಹೊರಗೆ ಬಂದಾಗ, ತಕ್ಷಣವೇ ಕರ್ತದೇವರ ಆತ್ಮರು ಫಿಲಿಪ್ಪನನ್ನು ತೆಗೆದುಕೊಂಡು ಹೋದರು. ಆಮೇಲೆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಕಂಚುಕಿಯು ಸಂತೋಷಪಡುತ್ತಾ ತನ್ನ ಮಾರ್ಗದಲ್ಲಿ ಹೊರಟುಹೋದನು.
40 Philip found himself at Azotus. He traveled through, announcing the good news in every town until he reached Caesarea. ಫಿಲಿಪ್ಪನು, ಅಜೋತಿನಲ್ಲಿ ಕಾಣಿಸಿಕೊಂಡು, ಕೈಸರೈಯ ತಲುಪುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಪ್ರಯಾಣಮಾಡಿದನು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]