Skip to content
The Believer's Library

Biblica® Open Kannada Contemporary Version 2022

Acts 12 OKCV

Show OKCV only
Verse × ×
1 About that time King Herod attacked some who belonged to the church, intending to harm them. ಆ ದಿನಗಳಲ್ಲಿ ಅರಸನಾದ ಹೆರೋದನು ದೇವರ ಸಭೆಯ ಸದಸ್ಯರನ್ನು ಹಿಂಸಿಸುವ ಉದ್ದೇಶದಿಂದ ಕೆಲವರನ್ನು ಬಂಧಿಸಿದನು.
2 He had James, the brother of John, put to death with the sword. ಯೋಹಾನನ ಸಹೋದರ ಯಾಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
3 Seeing that this pleased the Jews, Herod proceeded to seize Peter too, during the days of Unleavened Bread. ಇದರಿಂದ ಯೆಹೂದ್ಯರಿಗೆ ಮೆಚ್ಚಿಕೆಯಾಯಿತೆಂದು ತಿಳಿದಾಗ, ಅವನು ಪೇತ್ರನನ್ನು ಬಂಧಿಸಿದನು. ಇದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸಮಯದಲ್ಲಿ ನಡೆಯಿತು.
4 He arrested him, put him in prison, and handed him to four squads of four soldiers to guard, intending to bring him out to the people after the Passover. ಪೇತ್ರನನ್ನು ಬಂಧಿಸಿದ ನಂತರ ಅವನನ್ನು ಸೆರೆಮನೆಯಲ್ಲಿ ಹಾಕಿದನು. ಪೇತ್ರನನ್ನು ಕಾಯಲು ನಾಲ್ಕು ದಳಗಳನ್ನು ನೇಮಿಸಿದನು. ಒಂದೊಂದು ದಳದಲ್ಲಿಯೂ ನಾಲ್ಕು ಸಿಪಾಯಿಗಳಿದ್ದರು. ಪಸ್ಕಹಬ್ಬ ಮುಗಿದ ತರುವಾಯ ಪೇತ್ರನನ್ನು ಬಹಿರಂಗ ವಿಚಾರಣೆಗೆ ತರಬೇಕೆಂದು ಉದ್ದೇಶಿಸಿದ್ದನು.
5 Peter was kept in prison, but the church prayed fervently to our Father for him. ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.
6 That night, before Herod could bring him out, Peter slept between two soldiers, bound with two chains; guards before the door kept watch over the prison. ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.
7 Suddenly an angel of our Father stood beside him, and light filled the cell. He struck Peter's side, woke him, and said, "Get up quickly." The chains fell from his hands. ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.
8 The angel told him, "Get dressed and put on your sandals." Peter complied. Then he said, "Wrap your cloak around you and follow me." “ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ,” ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. “ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು,” ಎಂದು ದೇವದೂತನು ಹೇಳಿದನು.
9 So Peter went out and followed, not knowing the angel's actions were real—he thought he saw a vision. ಪೇತ್ರನು ಸೆರೆಮನೆಯಿಂದ ಹೊರಗೆ ಅವನನ್ನು ಹಿಂಬಾಲಿಸಿ ಹೊರಟನು. ದೇವದೂತನು ಮಾಡುತ್ತಿರುವುದು ನಿಜವಾಗಿಯೂ ನಡೆಯುತ್ತಿದೆ ಎಂಬುದು ಅವನಿಗೆ ತಿಳಿಯಲಿಲ್ಲ. ತಾನು ದರ್ಶನ ಕಾಣುತ್ತಿರುವೆನೋ ಎಂದು ಭಾವಿಸಿದನು.
10 Passing the first and second guard posts, they reached the iron gate to the city, which opened for them on its own. They went out, walked one street, and the angel suddenly left him. ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು.
11 Then Peter came to himself and said, "Now I know for certain: our Father sent his angel and rescued me from Herod's hand and from everything the Jewish people expected." ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು.
12 Aware of this, he went to Mary's house, mother of John also called Mark, where many were gathered praying. ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
13 When Peter knocked at the door of the gateway, a servant girl named Rhoda came to answer. ಪೇತ್ರನು ಬಾಗಿಲನ್ನು ತಟ್ಟಿದಾಗ, ರೋದೆ ಎಂಬ ಸೇವಕಿ ಬಾಗಿಲು ತೆರೆಯಲು ಬಾಗಿಲ ಬಳಿಗೆ ಬಂದಳು.
14 Recognizing Peter's voice, she was so overjoyed she ran in without opening the gate, announcing Peter stood there. ಪೇತ್ರನ ಧ್ವನಿಯನ್ನು ಗುರುತಿಸಿ ಸಂತೋಷದಿಂದ ಕೂಡಿದವಳಾಗಿ ಬಾಗಿಲು ತೆರೆಯದೆ ಹಿಂದೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿಯಲ್ಲಿದ್ದಾನೆ!” ಎಂದು ತಿಳಿಸಿದಳು.
15 "You're out of your mind," they said. But she insisted it was true. So they said, "It's his angel." ಆದರೆ ಅವರು, “ನಿನಗೆ ಹುಚ್ಚುಹಿಡಿದಿದೆ,” ಎಂದರು. ತಾನು ಹೇಳುವುದು ನಿಜ ಎಂದು ಆಕೆ ಒತ್ತಿ ಹೇಳುತ್ತಿರಲು ಅವರು, “ಅದು ಅವನ ದೂತನೇ ಆಗಿರಬೇಕು,” ಎಂದರು.
16 But Peter kept on knocking, and when they opened the door and saw him, they were astonished. ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಹೋಗಿ ಬಾಗಿಲು ತೆರೆಯಲು ಅವನನ್ನು ಕಂಡು ಅತ್ಯಾಶ್ಚರ್ಯಗೊಂಡರು.
17 Signaling with his hand for quiet, he explained how our Father had led him out of prison. "Tell James and the brothers and sisters this," he said, then left for another place. ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
18 When morning came, there was no small commotion among the soldiers over what had become of Peter. ಬೆಳಗಾದ ಮೇಲೆ ಪೇತ್ರನಿಗೆ ಏನಾಯಿತೆಂದು ಸೈನಿಕರ ನಡುವೆ ಬಹಳಷ್ಟು ಗೊಂದಲವಿತ್ತು.
19 Herod, after searching for him and not finding him, questioned the guards and ordered them executed. Then he went down from Judea to Caesarea and stayed there. ಹೆರೋದನು ಅವನನ್ನು ಹುಡುಕಿ ಕಾಣದೆ ಹೋದದ್ದರಿಂದ ಕಾವಲುಗಾರರನ್ನು ವಿಚಾರಿಸಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಅನಂತರ ಹೆರೋದನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಸ್ವಲ್ಪ ಸಮಯ ಇದ್ದನು.
20 Herod was enraged at Tyre and Sidon. Together they came to him, and having won over Blastus, the king's chamberlain, they requested peace, since their land depended on the king's land for food. ಅವನು ಟೈರ್ ಮತ್ತು ಸೀದೋನಿನ ಜನರೊಂದಿಗೆ ಬಹು ಕೋಪವುಳ್ಳವನಾಗಿದ್ದನು. ಈಗ ಅವರೆಲ್ಲರೂ ಒಂದಾಗಿ ಅವನ ಬಳಿ ಬಂದು ಅರಸನ ನಂಬಿಗಸ್ತ ಸೇವಕನಾದ ಬ್ಲಾಸ್ತ ಎಂಬುವನ ಬೆಂಬಲವನ್ನು ಪಡೆದುಕೊಂಡು, ಸಂಧಾನ ಮಾಡಿಕೊಳ್ಳಲು ಅರಸನನ್ನು ಕೇಳಿಕೊಂಡರು. ಏಕೆಂದರೆ ಅವರ ಆಹಾರ ಧಾನ್ಯಗಳು ಅರಸನ ಸೀಮೆಯಿಂದ ಬರುತ್ತಿದ್ದವು.
21 On the set day Herod dressed in royal robes, sat on the throne, and made a speech to them. ನೇಮಕವಾದ ದಿನ ಹೆರೋದನು ತನ್ನ ರಾಜವಸ್ತ್ರಗಳನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡು ಜನರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಿದನು.
22 And the crowd kept shouting, "This is the voice of a god, not of a man!" “ಇದು ಮಾನವ ಧ್ವನಿಯಲ್ಲ ದೇವರದೇ!” ಎಂದು ಜನರು ಆರ್ಭಟಿಸಿದರು.
23 Instantly an angel of our Father struck him down for not giving our Father the glory, and worms ate him and he died. ಹೆರೋದನು ದೇವರಿಗೆ ಸಲ್ಲಿಸಬೇಕಾದ ಮಹಿಮೆ ಸಲ್ಲಿಸದೇ ಹೋದದ್ದರಿಂದ ಕೂಡಲೇ ಒಬ್ಬ ದೇವದೂತನು ಅವನನ್ನು ಹೊಡೆಯಲು ಅವನು ಹುಳ ಬಿದ್ದು ಸತ್ತುಹೋದನು.
24 But the word of our Father continued to grow and spread. ದೇವರ ವಾಕ್ಯವಾದರೋ ವೃದ್ಧಿಯಾಗುತ್ತಾ ಪ್ರಸಾರಗೊಂಡಿತು.
25 Barnabas and Saul returned from Jerusalem, having finished their mission, taking with them John, also called Mark. ಬಾರ್ನಬ ಮತ್ತು ಸೌಲನು ತಮ್ಮ ಸೇವಾಕಾರ್ಯವನ್ನು ಮುಗಿಸಿ, ಮಾರ್ಕ ಎಂದು ಕರೆಯಲಾಗುತ್ತಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಯೆರೂಸಲೇಮಿನಿಂದ ಹೊರಟು ಹೋದರು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]