Skip to content
The Believer's Library

Biblica® Open Kannada Contemporary Version 2022

2 Samuel 4 OKCV

Show OKCV only
Verse × ×
1 When Saul's son Ish-bosheth heard Abner had died in Hebron, he lost his courage, and all Israel was shaken. ಅಬ್ನೇರನು ಹೆಬ್ರೋನಿನಲ್ಲಿ ಮರಣ ಹೊಂದಿದನೆಂದು ಸೌಲನ ಮಗ ಈಷ್ಬೋಶೆತನು ಕೇಳಿದಾಗ, ಅವನು ಧೈರ್ಯವನ್ನು ಕಳೆದುಕೊಂಡನು. ಇಸ್ರಾಯೇಲರೆಲ್ಲರು ಕಳವಳಗೊಂಡರು.
2 Saul's son had two raiding-band leaders: Baanah and Rechab, sons of Rimmon the Beerothite, of Benjamin—for Beeroth too is counted part of Benjamin, ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.
3 for the Beerothites had fled to Gittaim and have lived there as foreigners to this day. ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ ಇಂದಿನವರೆಗೂ ಅಲ್ಲಿ ಪ್ರವಾಸಿಗಳಾಗಿದ್ದಾರೆ.
4 Jonathan, Saul's son, had a boy lame in both feet. He was five when news of Saul and Jonathan came from Jezreel; his nurse grabbed him to flee, but as she rushed he fell and was crippled. His name was Mephibosheth. ಸೌಲನ ಮಗ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಸೌಲನೂ, ಯೋನಾತಾನನೂ ಮರಣ ಹೊಂದಿದರೆಂಬ ವರ್ತಮಾನ ಇಜ್ರೆಯೇಲ್ ಎಂಬ ಪಟ್ಟಣದಿಂದ ಬಂದಾಗ, ಅವನು ಐದು ವರ್ಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.
5 Rechab and Baanah, sons of Rimmon the Beerothite, came to Ish-bosheth's house in the heat of the day, while he took his noon rest. ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನೂ, ಬಾಣನೂ ಹೊರಟು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಈಷ್ಬೋಶೆತನ ಮನೆಗೆ ಬಂದರು. ಅವನು ಮಂಚದ ಮೇಲೆ ಮಲಗಿಕೊಂಡಿದ್ದನು.
6 They went into the middle of the house as if to get wheat, stabbed him in the belly, and Rechab and his brother Baanah escaped. ಅವರು ಗೋಧಿಯನ್ನು ತೆಗೆದುಕೊಂಡು ಹೋಗುವವರಂತೆ ನಡುಮನೆಯೊಳಗೆ ಹೋಗಿ ಅವನ ಹೊಟ್ಟೆಯಲ್ಲಿ ತಿವಿದರು. ರೇಕಾಬನೂ ಅವನ ಸಹೋದರ ಬಾಣನೂ ಗುಟ್ಟಾಗಿ ಒಳಗೆ ಜಾರಿಕೊಂಡರು.
7 They had entered the house while Ish-bosheth lay on his bed in his bedroom. They struck him down, killed him, cut off his head, and took it, traveling all night by way of the Arabah. ಅವರು ಮನೆಯೊಳಗೆ ಪ್ರವೇಶಿಸಿದಾಗ, ಅರಸನು ಮಲಗುವ ಕೋಣೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಅವರಿಬ್ಬರು ಅವನನ್ನು ಹೊಡೆದು, ಕೊಂದುಹಾಕಿ, ತಲೆಯನ್ನು ಕಡಿದು, ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ನಡೆದರೆ.
8 They brought Ish-bosheth's head to David at Hebron and told the king, "Here is the head of Ish-bosheth son of Saul, your enemy who sought your life. Today our Father has avenged my lord the king on Saul and his offspring." ಅನಂತರ ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋಶೆತನ ತಲೆಯನ್ನು ತಂದು ಅರಸನಿಗೆ, “ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಯೆಹೋವ ದೇವರು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲನಿಗೂ, ಅವನ ಸಂತಾನಕ್ಕೂ ಮುಯ್ಯಿ ತೀರಿಸಿದ್ದಾರೆ,” ಎಂದರು.
9 But David answered Rechab and his brother Baanah, sons of Rimmon the Beerothite: "As surely as our Father lives, who has redeemed my life from every distress, ಆಗ ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನಿಗೂ, ಅವನ ಸಹೋದರ ಬಾಣನಿಗೂ ಉತ್ತರವಾಗಿ, “ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಜೀವದಾಣೆ,
10 when a man told me, 'Look, Saul is dead,' thinking he brought good news, I seized and killed him at Ziklag. That was the reward I gave him for his news! ಶುಭವರ್ತಮಾನವನ್ನು ತಂದವನು ನಾನು, ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡುವೆನೆಂದು ನೆನಸಿ ಒಬ್ಬನು ನನಗೆ, ‘ಇಗೋ, ಸೌಲನು ಮರಣಹೊಂದಿದನು,’ ಎಂದು ಹೇಳಿದ್ದರಿಂದ, ನಾನು ಚಿಕ್ಲಗಿನಲ್ಲಿ ಅವನಿಗೆ ಮರಣದಂಡನೆಯನ್ನು ವಿಧಿಸಿದೆನು.
11 How much more when wicked men kill a righteous man in his own house, on his own bed—should I not now demand his blood from you and remove you from the earth? ಹಾಗಾದರೆ, ತನ್ನ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ನಿರ್ದೋಷಿಯನ್ನು ಕೊಲೆಮಾಡಿದ ದುಷ್ಟ ಮನುಷ್ಯರನ್ನು ಎಷ್ಟೋ ಹೆಚ್ಚಾಗಿ ಕೊಲ್ಲಿಸುವೆನು. ಈಗ ನಾನು ನಿಮ್ಮ ಕೈಯಿಂದ ಅವನ ರಕ್ತ ವಿಚಾರಣೆ ಮಾಡಿ, ನಿಮ್ಮನ್ನು ಭೂಮಿಯಿಂದ ತೆಗೆದುಬಿಡುವೆನು,” ಎಂದನು.
12 David ordered his young men, and they killed them, cut off their hands and feet, and hung the bodies by the pool in Hebron. But Ish-bosheth's head they buried in Abner's tomb at Hebron." ದಾವೀದನು ತನ್ನ ಜನರಿಗೆ ಆಜ್ಞಾಪಿಸಿದ್ದರಿಂದ, ಅವರು ಅವರನ್ನು ಕೊಂದುಹಾಕಿ, ಅವರ ಕೈಕಾಲುಗಳನ್ನು ಕಡಿದು, ಹೆಬ್ರೋನಿನ ಕೊಳದ ಬಳಿಯಲ್ಲಿ ತೂಗುಹಾಕಿದರು. ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು, ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಳಿಟ್ಟರು.
FHB

Scripture from Father’s Heart Bible™. © 2026 Spirit Media Publishing, the imprint of Spirit Media Inc. All rights reserved. In Divine Voice™ Color, the words spoken by our Father show in blue, the words of the Son in red, and the words of the Spirit in purple.

OKCV

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]